ಯಾದಗಿರಿ : ಚಾಲಕನ ನಿಯಂತ್ರಣ ತಪ್ಪಿದ ಕೆಎಸ್ಆರ್ಟಿಸಿ ಬಸ್ ಪಲ್ಟಿಯಾಗಿದ್ದು. ಬಸ್ನಲ್ಲಿ ಪ್ರಯಾಣಿಸುತ್ತಿದ್ದ 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಯಾದಗಿರಿ ಜಿಲ್ಲೆಯ ವಡಗೇರ ಪಟ್ಟಣದ ಸಮೀಪ ಘಟನೆ ನಡೆದಿದ್ದು, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ವಡಗೇರ ತಾಲೂಕಿನ ಸಂಗಮ ಗ್ರಾಮದಿಂದ ಯಾದಗಿರಿ ನಗರಕ್ಕೆ ಬರ್ತಾಯಿದ್ದ ಬಸ್ ಪಲ್ಟಿಯಾಗಿದೆ.
ಇದನ್ನೂ ಓದಿ :ಹಣ ಮತ್ತು ಮದ್ಯದ ಮೇಲೆ ಗಮನ ಹರಿಸಿ ಕೇಜ್ರಿವಾಲ್ ಸೋತಿದ್ದಾನೆ: ಅಣ್ಣಾ ಹಜಾರೆ
ರಸ್ತೆ ಮಧ್ಯದಲ್ಲಿ ಬೈಕ್ ಸವಾರನೊರ್ವ ಸ್ಕಿಡ್ ಆಗಿ ಬಿದ್ದಿದ್ದನು. ಅದನ್ನು ತಪ್ಪಿಸಲು ಹೋಗಿ ಅವಘಡ ಸಂಭವಿಸಿದ್ದು. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ. ವಡಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.