Saturday, February 8, 2025

ರಾಷ್ಟ್ರ ರಾಜಧಾನಿಯಲ್ಲಿ ಕೇಸರಿ ಪಡೆ ಕಮಾಲ್​: ಬಹುಮತದತ್ತ ಬಿಜೆಪಿ

ದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಮತ ಎಣಿಕೆ ಶುರುವಾಗಿದ್ದು, ಕೇಸರಿ ಪಡೆ ಭರ್ಜರಿ ಕಮಾಲ್‌ ಮಾಡಿದೆ. ಆರಂಭಿಕ ಟ್ರೆಂಡ್​ನಲ್ಲಿ ಬಿಜೆಪಿ ಬಹುಮತ ಬೇಕಿರುವ ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು. ಆಮ್​ ಆದ್ಮಿಯ ಘಟಾನುಘಟಿಗಳು ಆರಂಭಿಹ ಹಿನ್ನಡೆ ಕಾಯ್ದುಕೊಂಡಿದ್ದಾರೆ.

ಮತ ಎಣಿಕೆ ಆರಂಭದಲ್ಲೇ ಕಳೆಗಟ್ಟಿದ್ದು ಮುಸ್ಲಿಂ ಪ್ರಾಬಲ್ಯವುಳ್ಳ ಕ್ಷೇತ್ರಗಳಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ. ಇತ್ತ ಆಪ್‌ನಲ್ಲಿ ಘಟಾನುಘಟಿ ನಾಯಕರು ಹಿನ್ನಡೆ ಅನುಭವಿಸಿದ್ದರೂ ಅರ್ಧಕ್ಕಿಂತ ಹೆಚ್ಚು ಕ್ಷೇತ್ರಗಳಿಗೆ ಬಿಜೆಪಿಗೆ ನೇರ ಪೈಪೋಟಿ ನೀಡುತ್ತಿದೆ.

ಇದನ್ನೂ ಓದಿ :ಮಾಟ-ಮಂತ್ರಕ್ಕೆ ಮಗನ ಸಾ*ವು: ಸ್ವಂತ ಸಹೋದರಿಗೆ ಬಲವಂತವಾಗಿ ವಿಷ ಕುಡಿಸಿದ ಅಣ್ಣ

9:00 ಗಂಟೆಯ ವೇಳೆಗೆ ಬಿಜೆಪಿ 43 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು. ಎಎಪಿ 25, ಕಾಂಗ್ರೆಸ್​ ಕೇವಲ 1 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನವದೆಹಲಿ ಕ್ಷೇತ್ರದಲ್ಲಿ ಮಾಜಿ ಸಿಎಂ ಅರವಿಂದ್​ ಕೇಜ್ರಿವಾಲ್​ 1500 ಮತಗಳಿಂದ ಹಿನ್ನಡೆ ಕಾಯ್ದುಕೊಂಡಿದ್ದು. ಹಾಲಿ ಸಿಎಂ ಆತಿಶಿ ಮರ್ಲೆನಾ, ಉಪಮುಖ್ಯಮಂತ್ರಿ ಮನೋಜ್​ ಸಿಸೋಡಿಯಾ ಸೇರಿದಂತೆ ಆಪ್​ನ ಘಟಾನುಘಟಿಗಳು ಹಿನ್ನಡೆ ಅನುಭವಿಸಿದ್ದಾರೆ.

RELATED ARTICLES

Related Articles

TRENDING ARTICLES