ನವದೆಹಲಿ: ದೆಹಲಿ ಚುನಾವಣೆಯಲ್ಲಿ ಮುಸ್ಲಿಮ್ ಬಾಹುಳ್ಯ ಇರುವ ಮುಸ್ತಫಾಬಾದ್ ಕ್ಷೇತ್ರದಲ್ಲಿ ಈ ಬಾರಿ ಕಮಲ ಅರಳಿದೆ. ಬಿಜೆಪಿಯ ಅಭ್ಯರ್ಥಿ ಮೋಹನ್ ಸಿಂಗ್ ಬಿಶ್ತ್ 17,578 ಮತಗಳಿಂದಿಂದ ಆಪ್‌ನ ಅದೀಲ್ ಅಹ್ಮದ್ ಖಾನ್ ವಿರುದ್ಧ ಜಯಗಳಿಸಿದ್ದಾರೆ. ಬಿಜೆಪಿಯ ಮೋಹನ್ ಸಿಂಗ್ ಬಿಶ್ತ್ 85,2015 ಮತಗಳನ್ನು ಪಡೆದರೆ ಆಪ್‌ನ ಅದೀಲ್ ಅಹ್ಮದ್ ಖಾನ್ 67,637 ಮತಗಳನ್ನು ಪಡೆದಿದ್ದಾರೆ.
ಮಾಜಿ ಕೌನ್ಸಿಲರ್ ಮತ್ತು 2020 ರ ದೆಹಲಿ ಗಲಭೆ ಆರೋಪಿಯಾ ಅಸಾದುದ್ದೀನ್ ಓವೈಸಿಯ ಎಐಎಂಐಎಂ ಟಿಕೆಟ್ ನೀಡಿತ್ತು. ತಾಹಿರ್ ಹುಸೇನ್ 33,474 ಮತಗಳನ್ನು ಪಡೆದಿದ್ದಾರೆ. ಮುಸ್ತಫಾಬಾದ್ ಕ್ಷೇತ್ರದಲ್ಲಿ 39.5% ಮುಸ್ಲಿಮ್ ಮತದಾರರಿದ್ದಾರೆ. ಅದೀಲ್ ಅಹ್ಮದ್ ಖಾನ್ ಮತ್ತು ತಾಹಿರ್ ಹುಸೇನ್ ಮಧ್ಯೆ ಮತಗಳು ಹಂಚಿ ಹೋಗಿದ್ದರಿಂದ ಮೋಹನ್ ಸಿಂಗ್ ಬಿಶ್ತ್ ಜಯಗಳಿಸಿದ್ದಾರೆ.
ಇದನ್ನೂ ಓದಿ :17 ಬಡ ಕುಟುಂಬದ ಜೋಡಿಗಳಿಗೆ ಮದುವೆ ಮಾಡಿಸಿ ಮಾದರಿಯಾದ ಮಂಗಳಮುಖಿ !
ಮೋಹನ್ ಸಿಂಗ್ 1998ರಿಂದಲೂ ಕರವಾಲ್ ನಗರದ ಶಾಸಕರಾಗಿದ್ದಾರೆ. ಆದರೆ ಕಳೆದ 2015ರ ಚುನಾವಣೆಯಲ್ಲಿ ಎಎಪಿಯ ಕಪಿಲ್ ಮಿಶ್ರಾ ವಿರುದ್ದ ಸೋತಿದ್ದರು. ಆದರೆ 2020ರಲ್ಲಿ ಮತ್ತೆ ಕರವಾಲ್ ನಗರದಿಂದ ಗೆದ್ದು ಶಾಸಕರಾಗಿದ್ದರು. ಆದರೆ ಬಾರಿ ಈ ಕ್ಷೇತ್ರದಿಂದ ಟಿಕೆಟ್ ಕೈ ತಪ್ಪಿದ ಕಾರಣ ಮುಸ್ತಫಾಬಾದ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದರು.
ಶೇಕಡಾ 40ರಷ್ಟು ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ಬಹುತೇಕ ಆಪ್ ಅಭ್ಯರ್ಥಿ ಗೆಲುವು ಸಾಧಿಸುತ್ತಾರೆ ಎಂದು ವಿಶ್ಲೇಷಿಸಲಾಗಿತ್ತು. ಆದರೆ ಇಬ್ಬರು ಮುಸ್ಲಿಂ ಅಭ್ಯರ್ಥಿಗಳ ನಡುವ ಮತಗಳು ಹಂಚಿಹೋದ ಹಿನ್ನಲೆ ಬಿಜೆಪಿ ಅಭ್ಯರ್ಥಿ ಗೆದ್ದು ಬೀಗಿದ್ದಾರೆ.