ಬೆಂಗಳೂರು : ರಾಜಧಾನಿಯ ಜನರಿಗೆ BMRCL ಮತ್ತೊಂದು ಶಾಕ್ ನೀಡಿದ್ದು. ಮೆಟ್ರೋ ಟಿಕೆಟ್ ದರವನ್ನು ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಶೇಕಡಾ 46%ರಷ್ಟು ಟಿಕೆಟ್ ದರವನ್ನು ಹೆಚ್ಚಳ ಮಾಡುವ ಮೂಲಕ ನಗರವಾಸಿಗಳಿಗೆ ಶಾಕ್ ನೀಡಿದೆ.
ನಮ್ಮ ಮೆಟ್ರೋ ಬೆಂಗಳೂರಿನ ಜನಜೀವನದ ಭಾಗವಾಗಿದೆ ಎಂದರೆ ತಪ್ಪಾಗುವುದಿಲ್ಲ. ಯಾವುದೇ ಟ್ರಾಫಿಕ್ ಕಿರಿಕಿರಿಯಿಲ್ಲದೆ. ನಗರದ ಹೃದಯ ಭಾಗಗಳಿಗೆ ಜನರನ್ನು ಕರೆದೊಯ್ಯುವ ಈ ಸಾರಿಗೆಯನ್ನು ಬೆಂಗಳೂರಿನಲ್ಲಿ ಲಕ್ಷಾಂತರ ಜನರು ಅವಲಂಭಿಸಿದ್ದಾರೆ. ಆದರೆ ಇದೀಗ BMRCL ಮೆಟ್ರೋ ಪ್ರಯಾಣಿಕರಿಗೆ ಶಾಕ್ ನೀಡಿದ್ದು. ಟಿಕೆಟ್ ಬೆಲೆಯನ್ನು ಶೇಕಡಾ 46ರಷ್ಟು ಏರಿಕೆ ಮಾಡಿ ಶಾಕ್ ನೀಡಿದೆ.
ಇದನ್ನೂ ಓದಿ: ದೇವರು ಕೊಟ್ಟ ತಂಗಿಗೆ 5 ಕೋಟಿ ವರದಕ್ಷಿಣೆ ಕೊಟ್ಟ ಸಹೋದರರು
ಕಳೆದ ತಿಂಗಳು ಬಸ್ ಟಿಕೆಟ್ ದರವನ್ನು ಹೆಚ್ಚಿಸಿದ್ದ ರಾಜ್ಯ ಸರ್ಕಾರದ ನೀತಿಯ ವಿರುದ್ದ ಸಾರ್ವಜನಿಕರು ಗರಂ ಆಗಿದ್ದರು. ಇದೀಗ ಮೆಟ್ರೋ ಟಿಕೆಟ್ ಬೆಲೆಯಲ್ಲಿ ಏರಿಕೆ ಜನರ ಜೇಬನ್ನು ಸುಡುವುದರಲ್ಲಿ ಯಾವುದೇ ಸಂಶಯವಿಲ್ಲ. BMRCL ನೀಡಿರುವ ಮಾಹಿತಿಯಂತೆ ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದ್ದು. ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರುವ ಪ್ರಯಾಣಿಕರಿಗೆ ಕೆಲವೊಂದು ರಿಯಾಯಿತಿಯನ್ನು ನೀಡಲಾಗಿದೆ.
ಅದರಲ್ಲೂ ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ಇದ್ರೆ ಶೇಕಡಾ 5 ರಷ್ಟು ರಿಯಾಯಿತಿ ಮುಂದುವರಿಕೆಯಾಗಿದ್ದು.
ಬಹು ಮುಖ್ಯವಾಗಿ ಸ್ಮಾರ್ಟ್ ಕಾರ್ಡ್ ನಲ್ಲಿ 90 ಕಡ್ಡಾಯವಾಗಿ ರಿಚಾರ್ಜ್ ಇರಲೇಬೇಕು ಎಂದು ಮೆಟ್ರೋ ಸುತ್ತೋಲೆಯನ್ನ ಹೊರಡಿಸಿದೆ. ಜೊತೆಗೆ ಸರ್ಕಾರಿ ರಜಾದಿನಗಳಲ್ಲಿ 10% ರಿಯಾಯಿತಿಯನ್ನು ನೀಡಿದ್ದಾರೆ.