ದೆಹಲಿ : ನವದೆಹಲಿ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು. ಆರಂಭಿಕ ಟ್ರೆಂಡ್ನಲ್ಲಿ ಆಡಳಿತಾರೂಡ ಆಮ್ ಆದ್ಮಿ ಪಕ್ಷ ಅಧಿಕಾರ ಕಳೆದುಕೊಳ್ಳುವ ಮುನ್ಸೂಚಣೆ ಕಾಣಿಸುತ್ತಿದೆ. ಆಮ್ ಆದ್ಮಿಯ ಈ ಹಿನ್ನಡೆಗೆ ಅಬಕಾರಿ ಹಗರಣವು ಕಾರಣವಿರಬಹದು ಎಂದು ರಾಜಕೀಯ ಪರಿಣಿತರು ವಿಶ್ಲೇಷಿಸುತ್ತಿದ್ದಾರೆ.
ಕಳೆದ ವರ್ಷದ ಅಬಕಾರಿ ಹಗರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜೈಲು ಸೇರಿದ್ದರು. ಕೇವಲ ಕೇಜ್ರಿವಾಲ್ ಅಲ್ಲದೆ ಮನೋಜ್ ಸಿಸೋಡಿಯಾ ಸೇರಿದಂತೆ ಎಎಪಿ ನಾಯಕರು ಜೈಲು ಪಾಲಗಿದ್ದರು. ಸುಮಾರು 3ತಿಂಗಳಿಗಿಂತ ಹೆಚ್ಚು ಕಾಲ ಜೈಲಿನಲ್ಲಿದ್ದ ಅರವಿಂದ್ ಜೈಲಿನಿಂದಲೆ ಅಧಿಕಾರ ನಡೆಸಿದ್ದರು. ಜೈಲಿನಿಂದ ಹೊರಬಂದ ನಂತರ ಅತಿಶಿ ಅವರನ್ನು ಸಿಎಂ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರವೇ ಅಧಿಕಾರ ಹಿಡಿಯುವುದಾಗಿ ಪ್ರತಿಜ್ಙ ಮಾಡಿದ್ದರು.
ಇದನ್ನೂ ಓದಿ :ಗೆಲುವಿನತ್ತ ದಾಪುಗಾಲಿಟ್ಟ ಬಿಜೆಪಿ: ಮಾಜಿ ಸಿಎಂ ಕೇಜ್ರಿವಾಲ್ ಹಿನ್ನಡೆ
ಆದರೆ ಚುನಾವಣೆಯಲ್ಲಿ ಸ್ವತಃ ಕೇಜ್ರಿವಾಲ್ ಹಿನ್ನಡೆ ಅನುಭವಿಸುತ್ತಿದ್ದು. ಮಧ್ಯನೀತಿ ಹಗರಣ ಆಮ್ ಆದ್ಮಿಗೆ ದೊಡ್ಡ ಹೊಡೆತ ನೀಡಿರುವುದಾಗಿ ಕಾಣಿಸುತ್ತಿದೆ. ಅದರ ಜೊತೆಗೆ ಯುಮುನೆ ವಿಷ ಸೇರಿಸಿದ್ದಾರೆ ಎಂಬ ಆರೋಪ ಸೇರಿದಂತೆ ಹಲವಾರು ಅಂಶಗಳು ಎಎಪಿ ಹಿನ್ನಡೆ ಕಾರಣವಾಗಿದೆ.