Saturday, February 8, 2025

ರಸ್ತೆಯಲ್ಲಿ ಅಡ್ಡ ಬಂದ ಜಿಂಕೆಯ ಪ್ರಾಣ ಉಳಿಸಲು ಹೋಗಿ ಬೈಕ್​ ಸವಾರ ಸಾ*ವು !

ಶಿವಮೊಗ್ಗ : ರಸ್ತೆಯಲ್ಲಿ ದಿಡೀರ್ ಎಂದು ಅಡ್ಡ ಬಂದ ಜಿಂಕೆಯನ್ನು ತಪ್ಪಿಸಲು ಹೋಗಿ ಕೆಲಗೆ ಬಿದ್ದ ಬೈಕ್​ ಸವಾರನೋರ್ವ ಸಾವನ್ನಪ್ಪಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದ್ದು. ಮೃತ ಸವಾರನನ್ನು 46 ವರ್ಷದ ಸತೀಶ್​ ಎಂದು ಗುರುತಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ, ಹಾಯಾ ಗ್ರಾಮದ ಶನೈಶ್ಚರ ದೇವಾಲಯದ ಬಳಿ ಘಟನೆ ನಡೆದಿದ್ದು. ರಸ್ತೆಯಲ್ಲಿ ದಿಢೀರ್‌ ಅಡ್ಡ ಬಂದ ಜಿಂಕೆಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬೈಕ್‌ ಅಪಘಾತವಾಗಿದೆ. ಬೈಕ್​ ಮೇಲಿದ್ದ ಸತೀಶ್​ ಕೆಳಗೆ ಬಿದ್ದು, ತೀವ್ರವಾಗಿ ಗಾಯಗೊಂಡಿದ್ದನು. ಕೂಡಲೇ ಆತನನ್ನು ವೆನ್​​ಲಾಕ್​ ಆಸ್ಪತ್ರೆಗೆ ದಾಖಲಿಸಿದರು ಕೂಡ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ನಗರವಾಸಿಗಳಿಗೆ ಮತ್ತೊಂದು ಶಾಕ್​: ಮೆಟ್ರೋ ಟಿಕೆಟ್​ ದರದಲ್ಲಿ ಭಾರೀ ಏರಿಕೆ

ಹಾಯಾ ಗ್ರಾಮದಿಂದ ರಾತ್ರಿ 12 ಗಂಟೆಗೆ ತಮ್ಮೂರು ಕುಪ್ಪಗಡ್ಡೆಗೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ನಡೆದಿದ್ದು. ತಲೆಗೆ ಗಂಭೀರವಾಗಿ ಗಾಯಗೊಂಡ ಸತೀಶ್​ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಸೊರಬ ಪೋಲಿಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES