ಕಲಬುರಗಿ : ಪತಿ ಪರಸ್ತ್ರೀ ಸಹವಾಸ ಮಾಡಿದ್ದಾನೆ ಎಂದು ಸ್ವಂತ ಹೆಂಡತಿಯೆ ಗಂಡನ ಕಾಲು ಮುರಿಯಲು 5 ಲಕ್ಷಕ್ಕೆ ಸುಪಾರಿ ನೀಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಸುಪಾರಿ ಪಡೆದ ಯುವಕರು ಗಂಡನ ಕಾಲು ಮುರಿಯುವಲ್ಲಿ ಯಶಸ್ವಿಯು ಆಗಿದ್ದಾರೆ.
ಕಲಬುರಗಿಯ ಅತ್ತರ ಕಂಪೌಡ ಬಳಿ ನಡೆದ ಘಟನೆ ನಡೆದಿದ್ದು. ವೆಂಕಟೇಶ್ ಎಂಬಾತ ಕಳೆದ ಕೆಲ ವರ್ಷಗಳ ಹಿಂದೆ ಉಮಾದೇವಿ ಎಂಬಾಕಯನ್ನು ಮದುವೆಯಾಗಿದ್ದನು. ಆದರೆ ಇತ್ತೀಚೆಗೆ ವೆಂಕಟೇಶ್ ಪರಸ್ತ್ರೀ ಜೊತೆಗೆ ಸಲುಗೆಯಿಂದ ವರ್ತಿಸುತ್ತಿದ್ದನು. ಈ ಬಗ್ಗೆ ಕೋಪಗೊಂಡಿದ್ದ ಉಮಾದೇವಿ ಗಂಡನ ಮೇಲೆ ಮುನಿಸಿಕೊಂಡಿದ್ದಳು. ಈ ಬಗ್ಗೆ ದಂಪತಿಗಳ ನಡುವೆ ಅನೇಕ ಬಾರಿ ಜಗಳವು ನಡೆದಿತ್ತು.
ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್: ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್
ಅನೇಕ ಬಾರಿ ಈ ವಿಷಯದ ಕುರಿತು ಜಗಳ ನಡೆದರು ಕೂಡ ಗಂಡ ಪರಸ್ತ್ರೀ ಸಹವಾಸವನ್ನು ಬಿಟ್ಟಿರಲಿಲ್ಲ. ಇದರಿಂದ ಕೋಪಗೊಂಡ ಹೆಂಡತಿ ಗಂಡನ ಕಾಲು ಮುರಿಸಿದರೆ ಗಂಡ ಶಾಶ್ವತವಾಗಿ ಮನೆಯಲ್ಲಿರುತ್ತಾನೆ ಎಂದು ಯುವಕರಿಗೆ 5 ಲಕ್ಷಕ್ಕೆ ಸುಪಾರಿ ನೀಡಿದ್ದಳು. ಸುಪಾರಿ ಪಡೆದ ಹಂತಕರು ವೆಂಕಟೇಶ್ನ ಕಾಲುಗಳನ್ನು ಮುರಿದಿದ್ದರು.
ಈ ಪ್ರಕರಣದ ತನಿಖೆ ನಡೆಸುತ್ತಿದ್ದ ಬ್ರಹ್ಮಾಪೂರ ಪೊಲೀಸರು ಇದೀಗ ಪ್ರಕರಣವನ್ನು ಭೇದಿಸಿದ್ದು. ಸುಪಾರಿ ನೀಡಿದ ಉಮಾದೇವಿ ಹಂತಕರಾದ ಆರೀಫ್,ಮನೋಹರ,ಸುನೀಲ್ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.