Tuesday, August 26, 2025
Google search engine
HomeUncategorized1850ರಲ್ಲಿ ಕಟ್ಟಿದ್ದ ಬಂಗಲೆಯಲ್ಲಿ ಬ್ರಿಟಿಷ್​ ಯುವತಿಯ ಆತ್ಮ: ಕೇರಳದ ಭಯಾನಕ ಸತ್ಯಕಥೆ

1850ರಲ್ಲಿ ಕಟ್ಟಿದ್ದ ಬಂಗಲೆಯಲ್ಲಿ ಬ್ರಿಟಿಷ್​ ಯುವತಿಯ ಆತ್ಮ: ಕೇರಳದ ಭಯಾನಕ ಸತ್ಯಕಥೆ

ದೆವ್ವದ ವಿಚಾರವಾಗಿ ಅನೇಕರ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಕೆಲವರು ದೆವ್ವ ಭೂತಗಳನ್ನು ನಂಬಿದರೆ ಮತ್ತೆ ಕೆಲವರು ಇವುಗಳನ್ನು ಮೂಡ ನಂಬಿಕೆ ಎಂದು ಕರೆಯುವುದುಂಟು. ಆದರೆ ಬಗೆಹರಿಯದ ಸರ್ಕಾರ ನಿಷೇಧಿಸಿರುವ ಅನೇಕ ರೋಚಕ ಸ್ಥಳಗಳು ಭಾರತದಲ್ಲಿ ಬಹಳಷ್ಟಿವೆ, ಅಂತಹದೆ ಒಂದು ಸತ್ಯ ಕಥೆ ಎಂದು ಜನರು ನಂಬಿರುವ ಸ್ಟೋರಿಯನ್ನು ಇಂದು ನಾವು ಹೇಳಲು ಹೊರಟ್ಟಿದ್ದೇವೆ.

ಕೇರಳದ ಭೂತ ಬಂಗಲೆ ಎಂದು ಕರೆಯಲ್ಪಡುವ ಬೋನಕಾಡ್​ ಬಂಗಲೆಯಲ್ಲಿ ದೆವ್ವವಿದೆ ಎಂದು ಜನರು ಇಂದಿಗೂ ನಂಬುತ್ತಾರೆ. ಹಚ್ಚ ಹಸುರಿನ ಗಮ್ಯ ಸ್ಥಳದಲ್ಲಿರುವ ಈ ಬಂಗಲೆ ನೋಡುವವರ ಮನಕ್ಕೆ ಸಂತೋಷ ನೀಡಿದರು ಕೂಡ, ಈ ಮನೆಯ ಬಗ್ಗೆ ಇರುವ ಕಥೆಗಳು ಎಂತವರನ್ನು ಕೂಡ ಒಂದು ಕ್ಷಣ ದಂಗಾಗಿಸುತ್ತದೆ.

ಇದನ್ನೂ ಓದಿ: ಪ್ರೇತ ಕಾಟಕ್ಕೆ ಕುಟುಂಬಸ್ಥರು ಕಂಗಾಲು: ಮೊಬೈಲ್​ ಕ್ಯಾಮರದಲ್ಲಿ ಸೆರೆಯಾಯ್ತು ಭೂತ

ಹೌದು.. ಒಂದು ಕಾಲದಲ್ಲಿ ಬ್ರಿಟಿಷ್ ಭೂಮಾಲೀಕ ಮತ್ತು ಅವರ ಪತ್ನಿ ಒಡೆತನದಲ್ಲಿದ್ದ 25 ಜಿಬಿ ಬಂಗಲೆ ಎಂದೆ ಕರೆಸಿಕೊಳ್ಳುವ ಈ ಬಂಗಲೆ ವಸಾಹತುಶಾಹಿ ಶ್ರೇಷ್ಠತೆಯ ಸಂಕೇತವಾಗಿತ್ತು. ಈ ಬಂಗಲೆಯ ಸುತ್ತ ಸುಮಾರು 3 ಕಿ.ಮೀ ವಿಸ್ತಾರದಲ್ಲಿ ಟೀ ಎಸ್ಟೆಟ್​ ಹಬ್ಬಿಕೊಂಡಿದ್ದು. ರಮಣೀಯ ಸ್ಥಳವಾಗಿ ಬರುವ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಆದರೆ ಈ ಬಂಗಲೆಯ ಒಳಗೆ ತೆರೆದುಕೊಂಡ ದುರಂತ ಘಟನೆಗಳು ಈ ಪ್ರದೇಶಕ್ಕೆ ತೆರಳುವವರನ್ನು ಒಂದು ಕ್ಷಣ ಬೆಚ್ಚಿ ಬೀಳಿಸುತ್ತವೆ.

ಇದನ್ನೂ ಓದಿ :ಆಟೋ ಮತ್ತು ಕಾರಿನ ಮುಖಾಮುಖಿ ಡಿಕ್ಕಿ: 9 ಜನರಿಗೆ ಗಂಭೀರ ಗಾಯ

1851ರಲ್ಲಿ ಈ ಬಂಗಲೆಯಲ್ಲಿ ಬ್ರಿಟಿಶ್​ ಅಧಿಕಾರಿಯೊಬ್ಬ ತನ್ನ ಕುಟುಂಬದೊಂದಿಗೆ ವಾಸಿಸುತ್ತಿದ್ದ. ಆದರೆ ಒಂದು ದಿನ ಅವರ 13 ವರ್ಷ ವಯಸ್ಸಿನ ಮಗಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದಳು. ಇದಾದ ಬಳಿಕ ಅವರು ತಮ್ಮ ಹೆಂಡತಿಯೊಂದಿಗೆ ಲಂಡನ್‌ಗೆ ಹೋದರು. ಅಲ್ಲಿಂದಾಚೆಗೆ ಈ ಬಂಗಲೆಯ ಕತೆಗಳು ಹುಟ್ಟಿಕೊಂಡವು. ಅಂದಿನಿಂದ ಇಂದಿನವರೆಗೂ ಕತೆ ಸಾಗತ್ತಲೇ ಇದೆ.

ಆ ಮಗುವಿನ ಮರಣದ ನಂತರ ಆ ಪ್ರದೇಶದಲ್ಲಿ ಅನೇಕ ವದಂತಿಗಳು ಹರಡಿದವು. ಆ ಮನೆಯ ಕಿಟಕಿಯ ಗಾಜು ಒಡೆಯುವ ಸದ್ದು, ಕಿರುಚಾಟ, ಬಂಗಲೆಯಲ್ಲಿ ದೆವ್ವ ಕಾಣಿಸುವುದು ಹೀಗೆ ಹಲವು ಕತೆಗಳು ಹರಿದಾಡತೊಡಗಿದವು. ಒಂದು ದಿನ ಸ್ಥಳೀಯ ಹುಡುಗಿಯೊಬ್ಬಳು ಉರುವಲು ಸಂಗ್ರಹಿಸಲು ಹೋದಾಗ ಬಂಗಲೆಗೆ ಹೋಗಿ ಹಿಂದಿರುಗಿದ ನಂತರ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದಳು. ಅವಿದ್ಯಾವಂತ ಹುಡುಗಿ ಇಂಗ್ಲಿಷ್ ಅನ್ನು ನಿರರ್ಗಳವಾಗಿ ಮಾತನಾಡುತ್ತಿದ್ದಳು. ಅಲ್ಲದೆ, ಓದುವುದು ಮತ್ತು ಬರೆಯುವುದನ್ನು ಮಾಡುತ್ತಿದ್ದಳು. ಸತ್ತ ಮಗುವಿನ ಆತ್ಮವು ಹುಡುಗಿಯನ್ನು ಆವರಿಸಿಕೊಂಡಿದೆ ಎಂದು ಅನೇಕ ಜನರು ನಂಬಲು ಶುರು ಮಾಡಿದರು.

ಅಂದಹಾಗೆ ಬೋನಕಾಡ್ ಬಂಗಲೆ ಕೇರಳದಾ ರಾಜಧಾನಿ ತಿರುವನಂತಪುರಂ ನಗರದಿಂದ 50 ಕಿಮೀ ದೂರದಲ್ಲಿದೆ. ಸರ್ಕಾರದ ಕಟ್ಟುನಿಟ್ಟಿನ ನಿರ್ಬಂಧಗಳಿಂದಾಗಿ, ಈ ಪ್ರದೇಶದಲ್ಲಿ ಯಾವುದೇ ಹೋಟೆಲ್‌ಗಳು ಅಥವಾ ರೆಸಾರ್ಟ್‌ಗಳಿಲ್ಲ. ಬಂಗಲೆಯ ಬಾಗಿಲು ಮತ್ತು ಕಿಟಕಿಗಳನ್ನು ಮುರಿದು ಕೆಲವು ಮರದ ಹಲಗೆಗಳಿಂದ ಬಾಗಿಲುಗಳನ್ನು ಮುಚ್ಚಲಾಗಿದೆ. ಹಗಲಿನಲ್ಲಿ ಮನೆಯಿಂದ ಹೊರಗೆ ಹೋಗುವ ಪ್ರೇತ ಪ್ರತಿ ರಾತ್ರಿ ಇಲ್ಲಿಗೆ ಬಂದು ತಿರುಗಾಡುತ್ತದೆ ಎಂದು ಸ್ಥಳೀಯರು ನಂಬಿದ್ದಾರೆ.

ಈ ಬಂಗಲೆಯಿಂದ ಮತ್ತೊಂದು ಕಥೆಯಿದ್ದು. ಆಂಗ್ಲರು ಈ ಸ್ಥಳದಲ್ಲೆ ಬಂಗಲೆ ನಿರ್ಮಿಸಲು ಕರಿಂತಂದನ್​ ಎಂಬ ಬುಡಕಟ್ಟು ಯುವಕನ ಸಹಾಯವನ್ನು ಪಡೆದಿದ್ದರು. ಆದರೆ ಬಂಗಲೆ ನಿರ್ಮಿಸಿದ ನಂತರ ಆ ಬುಡಕಟ್ಟು ಯುವಕನನ್ನು ಕೊಲೆ ಮಾಡಿದರು. ಅದಕ್ಕೆ ಪ್ರತಿಯಾಗಿ ಆ ಯುವಕ ಪ್ರೇತವಾಗಿ ಬಂದು ಬ್ರಿಟಿಷ್​ ಅಧಿಕಾರಿಯ ಮಗಳನ್ನು ಕೊಂದನು ಎಂದು ನಂಬಲಾಗಿದ್ದು. ಈ ಜಾಗದಲ್ಲಿ ಕರಿತಂದನ್​ ಮತ್ತು ಬ್ರಿಟಿಷ್​ ಅಧಿಕಾರಿಯ ಮಗಳ ಆತ್ಮವಿದೆ ಎಂದು ಸ್ಥಳೀಯರು ನಂಬಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments