ಬೆಂಗಳೂರು : ರಕ್ಷಿತಾ ಸಹೋದರ ನಟ ರಾಣಾ ಮದುವೆ ಅರಮನೆ ಮೈದಾನದ ಚಾಮರ ವಜ್ರದಲ್ಲಿ ನಡೆಯುತ್ತಿದೆ. ಬಹುಕಾಲದ ಗೆಳತಿ ರಕ್ಷಿತಾ ಜೊತೆ ರಾಣಾ ವಿವಾಹವಾಗುತ್ತಿದೆ. ಫ್ಯಾಷನ್ ಡಿಸೈನರ್ ಆಗಿರುವ ರಕ್ಷಿತಾ ಅವರನ್ನು ರಾಣಾ ವರಿಸುತ್ತಿದ್ದು. ಈ ಇಬ್ಬರು ಕಳೆದ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಸಹೋದರನ ಮದುವೆಯನ್ನು ನಟಿ ರಕ್ಷಿತಾ ಅದ್ದೂರಿಯಾಗಿ ನಡೆಸಿಕೊಡುತ್ತಿದ್ದು. ರಾಣ ಮದುವೆಗೆ ಸಿನಿ ಗಣ್ಯರ ದಂಡೆ ಆಗಮಿಸಿದೆ. ಹಿರಿಯ ನಟಿಯರಾದ ಶ್ರುತಿ, ಮಾಳವಿಕ, ಸುಧಾರಾಣಿ, ವಿನಯ ಪ್ರಸಾದ್, ಸಚಿನ್ ಚೆಲುವರಾಯಸ್ವಾಮಿ, ಜಾನಿ ಮಾಸ್ಟರ್, ನಿರ್ದೇಶಕ ಮಹೇಶ್ ಬಾಬು, ಪ್ರೊಡ್ಯೂಸರ್ ಎನ್ ಕುಮಾರ್ ,
ರಮೇಶ್ ಅರವಿಂದ್ ದಂಪತಿ, ಹಿರಿಯ ನಟ ದತ್ತಣ್ಣ, ಹಿರಿಯ ನಟಿ ಅಂಬಿಕಾ, ನಟಿ ಅಂಜಲಿ, ತಾರಾ,
ನಿರ್ದೇಶಕಿ ಕವಿತಾ ಲಂಕೇಶ್, ನಿರ್ಮಾಪಕ ಸಂದೇಶ್ ನಾಗರಾಜ್ ಆಗಮಿಸಿದ್ದಾರೆ.
ಇದನ್ನೂ ಓದಿ :ಗರ್ಭಿಣಿ ಮೇಲೆ ಅತ್ಯಾಚಾರಕ್ಕೆ ಯತ್ನ: ಕಿರುಚಿದ ಮಹಿಳೆಯನ್ನು ರೈಲಿನಿಂದ ಹೊರತಳ್ಳಿದ ಆರೋಪಿ
ಜೊತೆಗೆ ಕಿಚ್ಚ ಸುದೀಪ್, ಉಪೇಂದ್ರ, ಪ್ರಿಯಾಂಕ ಉಪೇಂದ್ರ, ನಟಿಯರಾದ ಅನುಪಮಾಗೌಡ, ಕೃಷಿ ತಾಪಂಡ
ಅಶ್ವಿನಿ ಪುನೀತ್ ರಾಜ್ ಕುಮಾರ್, ಶ್ರುತಿ ಹರಿಹರನ್ , ನಿಧಿ ಸುಬ್ಬಯ್ಯ, ಮಾಜಿ ಸಚಿವ ಬಿಸಿ ಪಾಟೀಲ್ ,
ಗಣೇಶ್ ದಂಪತಿ, ನಟಿ ಅಮೃತಾ ಅಯ್ಯಂಗಾರ್, ನಟಿ ರೋಶಿನಿ ಪ್ರಕಾಶ, ನಿರ್ದೇಶಕ ನಾಗಾಭರಣ, ಛಾಯಾಗ್ರಾಹಕ, ಭುವನ್ ಗೌಡ, ಹಿರಿಯ ನಟಿ ಭಾವನಾ ರಾಮಣ್ಣ, ಪ್ರಜ್ವಲ್ ದೇವರಾಜ್ ದಂಪತಿ, ಜೈ ಜಗದೀಶ, ಧನ್ಯಾ ರಾಮ್ ಕುಮಾರ್, ಪೂರ್ಣಿಮಾ ರಾಮ್ ಕುಮಾರ್ ಸೇರಿದಂತೆ ಹಲವರು ಆಗಮಿಸಿದ್ದಾರೆ.