ರಾಮನಗರ : ಬೆಂಗಳೂರಿಗೆ ನೀರು ಕೊಡಿಸುವುದೇ ನನ್ನ ಕೊನೆಯ ಆಸೆ ಎಂಬ ಹೆಚ್.ಡಿ ದೇವೇಗೌಡ ಅವರು ಹೇಳಿಕೆ ಟಾಂಗ್ ಕೊಟ್ಟ ಡಿಸಿಎಂ. ಡಿಕೆ.ಶಿವಕುಮಾರ್, ‘ನಾನು ಈ ಬೆಂಗಳೂರಿನ ಚರಿತ್ರೆಗೆ ಒಂದು ಹೊಸ ಇತಿಹಾಸ ಬರೆದಿದ್ದೇನೆ ಎಂದು ಹೇಳಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಒದಗಿಸುವ ವಿಚಾರದ ಕುರಿತು ಮಾತನಾಡಿದ ಡಿ,ಕೆ ಶಿವಕುಮರ್ ‘ಈ ಡಿಕೆ.ಶಿವಕುಮಾರ್ ಬೆಂಗಳೂರಿನ ಚರಿತ್ರೆಗೆ ಒಂದು ಇತಿಹಾಸ ಬರೆದಿದ್ದಾನೆ, ನಾನು ಮಂತ್ರಿ ಆದ ತಕ್ಷಣ ಎಲ್ಲಾ ಕಡೆ ಕುಡಿಯುವ ನೀರು ರಿಜರ್ವ್ ಮಾಡಿದ್ದೇವೆ. ಎಲ್ಲಾ ಹಳ್ಳಿಗಳಿಗೂ ನೀರುಕೊಟ್ಟಿದ್ದೇವೆ, ತೊರೆಕಾಡನಹಳ್ಳಿ, ಎತ್ತಿನಹೊಳೆಯಿಂದ ನೀರು ತಂದಿದ್ದೇವೆ. ಮುಂದೆ ತುಮಕೂರಿನವರೆಗೂ ನೀರು ಕೊಡುವ ಕೆಲಸ ಆಗುತ್ತೆ.ಬಿಜೆಪಿ ಸರ್ಕಾರ ಆಗಲಿ, ದಳದ ಸರ್ಕಾರ ಆಗಲಿ ಈ ಕೆಲಸ ಮಾಡಿಲ್ಲ.
ನಾವು ಪಾದಯಾತ್ರೆ ಮಾಡಿದಾಗ ಸಾಕಷ್ಟು ಟೀಕೆ, ಟಿಪ್ಪಣಿ ಮಾಡಿದ್ದರು. ದೇವೇಗೌಡರು ಮೋದಿ ಕೈಹಿಡಿದು ಮೇಕೆದಾಟಿಗೆ ಸಹಿ ಹಾಕಿಸ್ತೀನಿ ಎಂದು ಹೇಳಿದ್ದರು ಆದರೆ ಇನ್ನೂ ಯಾಕೆ ಸಹಿ ಹಾಕಿಸಿಲ್ಲ. ಕೇವಲ ಪ್ರಚಾರಕ್ಕೆ ಮಾತನಾಡೋದಲ್ಲ, ರಾಜಕೀಯ ಬದ್ಧತೆ ಇರಬೇಕು. ಅವರ ಹಿರಿತನಕ್ಕೆ ಗೌರವ ಇದೆ, ಆ ಗೌರವ ಉಳಿಸಿಕೊಳ್ಳಲಿ ಎಂದು ಹೇಳಿದರು.
ಇದನ್ನೂ ಓದಿ :ಪ್ರೇತ ಕಾಟಕ್ಕೆ ಕುಟುಂಬಸ್ಥರು ಕಂಗಾಲು: ಮೊಬೈಲ್ ಕ್ಯಾಮರದಲ್ಲಿ ಸೆರೆಯಾಯ್ತು ಭೂತ
ಕುಮಾರಸ್ವಾಮಿ ಹೇಳಿಕೆಗೆ ಟಾಂಗ್ ನೀಡಿದ ಡಿಕೆಶಿ !
ರಾಜ್ಯ ಅನುಧಾನ ತರುವ ವಿಚಾರದಲ್ಲಿ ಯಾರೂ ಕೂಡ ಕೇಂದ್ರ ಮಂತ್ರಿಗಳ ಬಳಿ ಚರ್ಚೆ ಮಾಡಿಲ್ಲ ಎಂಬ ವಿಚಾರದ ಕುರಿತು ಹೇಳಿಕೆ ನೀಡಿದ ಡಿಕೆ.ಶಿವಕುಮಾರ್ ‘ನಿಮ್ಮ ಜೊತೆ ಯಾಕೆ ಚರ್ಚೆ ಮಾಡಬೇಕು, ನಿಮಗೆ ಜವಾಬ್ದಾರಿ ಇಲ್ಲವಾ ಮಿಸ್ಟರ್ ಕುಮಾರಸ್ವಾಮಿ.? ನಾನು ರಾಜ್ಯಕ್ಕೆ ಏನು ಕೊಡುಗೆ ಕೊಡಬೇಕು ಅಂತ ನಿಮಗೆ ಗೊತ್ತಿಲ್ವಾ.? ನಾವು ಎಲ್ಲಾ ಮಂತ್ರಿಗಳು ಕೇಂದ್ರ ಸಚಿವರನ್ನ, ಪ್ರಧಾನ ಮಂತ್ರಿಗಳನ್ನ ಭೇಟಿಯಾಗಿದ್ದೇವೆ.
ಇವರೇನು ಫೈನಾನ್ಸ್ ಮಿನಿಸ್ಟರ್ ಅಲ್ಲಾ.? ನಿಮಗೆ ವೈಯಕ್ತಿಕ ಆಸಕ್ತಿಯೇ ಹೆಚ್ಚು, ರಾಜ್ಯ, ದೇಶದ ಆಸಕ್ತಿ ಇಲ್ಲ. ಎಂದು ದಳಪತಿಗಳ ವಿರುದ್ಧ ಡಿಸಿಎಂ ಡಿಕೆಶಿ ವಾಗ್ದಾಳಿ ನಡೆಸಿದರು.