Friday, February 7, 2025

ಸಿಎಂ ಸಿದ್ದರಾಮಯ್ಯಗೆ ಬಿಗ್​ ರಿಲೀಫ್​: ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್​

ಧಾರವಾಡ : ಮೂಡಾ ಹಗರಣದಲ್ಲಿ ಸಿಬಿಐ ತನಿಖೆ ನಡೆಸಬೇಕು ಎಂದು ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನಾಗಪ್ರಸನ್ನರ ಪೀಠ ತೀರ್ಪು ನೀಡಿದ್ದು. ಮೂಡ ಹಗರಣದಲ್ಲಿ ಸಿಬಿಐ ತನಿಖೆಯ ಅವಶ್ಯಕತೆ ಇಲ್ಲ ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.

ಹೌದು.. ಸಿದ್ದರಾಮಯ್ಯರ ಪತ್ನಿಗೆ ಅವರ ಸಹೋದರ ಅರಿಶಿಣ-ಕುಂಕುಮದ ರೀತಿಯಲ್ಲಿ ನೀಡಿದ್ದ 3 ಎಕರೆ ಜಮೀನನ್ನು ಮೂಡ ವಶಪಡಿಸಿಕೊಂಡು ಅದಕ್ಕೆ ಪ್ರತಿಯಾಗಿ ಸಿಎಂ ಪತ್ನಿಗೆ 50:50ರ ಅನುಪಾತದಲ್ಲಿ 13 ಸೈಟ್​​ಗಳನ್ನು ಮೈಸೂರಿನ ಪ್ರತಿಷ್ಟಿತ ಬಡಾವಣೆಯಲ್ಲಿ ನೀಡಲಾಗಿತ್ತು. ಈ ಸೈಟು ಹಂಚಿಕೆಯಲ್ಲಿ ಸಿದ್ದರಾಮಯ್ಯನವರು ತಮ್ಮ ಅಧಿಕಾರದ ಪ್ರಭಾವ ಬಳಸಿದ್ದಾರೆ ಎಂದು ಸ್ನೇಹಮಯಿ ಕೃಷ್ಣ ಸೇರಿದಂತೆ ಮೂರು ಜನ ದೂರುದಾರರು ತನಿಖೆ ಅನುಮತಿ ಕೋರಿ ರಾಜ್ಯ ಪಾಲರಿಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ :ಪ್ರೇತ ಕಾಟಕ್ಕೆ ಕುಟುಂಬಸ್ಥರು ಕಂಗಾಲು: ಮೊಬೈಲ್​ ಕ್ಯಾಮರದಲ್ಲಿ ಸೆರೆಯಾಯ್ತು ಭೂತ

ಇದನ್ನು ಪರಿಶೀಲಿಸಿದ್ದ ರಾಜ್ಯಪಾಲರು ಲೋಕಾಯುಕ್ತ ತನಿಖೆ ಆದೇಶ ನೀಡಿದ್ದರು. ಈ ಆದೇಶವನ್ನು ಪ್ರಶ್ನಿಸಿಕೊಂಡು ಸಿಎಂ ಹೈಕೋರ್ಟ್​ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್​ ಮೂಡದಲ್ಲಿ ಹಾಗಿರುವ ಹಗರಣವನ್ನು ಲೋಕಯುಕ್ತ ತನಿಖೆ ನಡೆಸಬೇಕು ಎಂದು ತೀರ್ಪು ನೀಡಿತ್ತು.

ಆದರೆ ಸ್ನೇಹಮಯಿ ಕೃಷ್ಣ ಲೋಕಾಯುಕ್ತದ ಮೂಲಕ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವಿಲ್ಲ. ಈ ಕೇಸ್​ನ್ನು ಸಿಬಿಐ ತನಿಖೆಗೆ ನೀಡಬೇಕು ಎಂದು ಹೈಕೋರ್ಟ್​ಗೆ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಮೂರ್ತಿ ನಾಗಪ್ರಸನ್ನರ ಪೀಠ ತೀರ್ಪು ನೀಡಿದ್ದು. ಸ್ನೇಹಮಹಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ

RELATED ARTICLES

Related Articles

TRENDING ARTICLES