ಕೊಯಮತ್ತೂರು: ಕೊಯಮತ್ತೂರಿನಿಂದ ತಿರುಪತಿಗೆ ಪ್ರಯಾಣಿಸುತ್ತಿದ್ದ ಗರ್ಭಿಣಿ ಮಹಿಳೆಯ ಮೇಲೆ ಇಬ್ಬರು ಪುರುಷರು ಅತ್ಯಾಚಾರ ಎಸಗಿದ್ದಾರೆ ಮತ್ತು ಅವರು ಸಹಾಯಕ್ಕಾಗಿ ಕಿರುಚಿದಾಗ, ದಾಳಿಕೋರರಲ್ಲಿ ಒಬ್ಬರು ಅವರನ್ನು ರೈಲಿನಿಂದ ತಳ್ಳಿದ್ದಾರೆ.
ಫೆಬ್ರವರಿ 6ರಂದು ಮಹಿಳೆ ತಮಿಳುನಾಡಿನಿಂದ ಆಂದ್ರಪ್ರದೇಶದ ಚಿತ್ತೂರಿಗೆ ಹೊರಟ್ಟಿದ್ದಳು. ತಮಿಳುನಾಡಿನಿಂದ ತಿರುಪತಿ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ಹೊರಟ್ಟಿದ್ದ ಮಹಿಳೆ ಮೇಲೆ ದುರುಳನೋರ್ವ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಇದನ್ನೂ ಓದಿ :ಸರ್ಕಾರದ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ ತಣ್ಣೀರೆರಚಿದ ರಾಜ್ಯಪಾಲರು: ಏಕೆ ಗೊತ್ತಾ !
ಮಹಿಳೆ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಒಟ್ಟು 7ಜನ ಮಹಿಳೆಯರು ಪ್ರಯಾಣಿಸುತ್ತಿದ್ದರು. ಆದರೆ ಅವರು ಜೋಲಾರ್‌ಪೆಟ್ಟಿ ರೈಲ್ವೆ ನಿಲ್ದಾಣದಲ್ಲಿ ಇಳಿದ ಮೇಲೆ, ಮಹಿಳೆ ಒಬ್ಬರೇ ಬೋಗಿಯಲ್ಲಿ ಇದ್ದರು. ಇದನ್ನು ಗಮನಿಸಿದ ಆರೋಪಿ ಮಹಿಳಾ ಬೋಗಿಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆಕೆ ತಪ್ಪಿಸಿಕೊಳ್ಳಲು ಯತ್ನಿಸಿ, ಸಹಾಯಕ್ಕಾಗಿ ಕಿರುಚಿದ್ದಕ್ಕೆ ರೈಲಿನಿಂದ ಹೊರಕ್ಕೆ ನೂಕಿದ್ದಾನೆ.
ಗಾಯಗೊಂಡ ಸ್ಥಿತಿಯಲ್ಲಿ ಮಹಿಳೆ ಸಾರ್ವಜನಿಕರಿಗೆ ಕಾಣಿಸಿದ್ದು, ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಹಿಳೆಯ ಕೈ, ಕಾಲು ಮತ್ತು ತಲೆಗೆ ಗಾಯಗಳಾಗಿವೆ. ಸದ್ಯ ವೆಲ್ಲೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ ಎಂದು ಜೋಲಾರ್‌ಪೆಟ್ಟೆ ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ.