ಹಾವೇರಿ : ದೇವಾಸ್ಥಾನದ ಕಳಸ ಸ್ಥಾಪನೆ ವೇಳೆ ದುರ್ಘಟನೆಯೊಂದು ನಡೆದಿದ್ದು. ದೇವಾಲಯದ ಗೋಪುರದ ಮೇಲೆ ಕಳಸ ಸ್ಥಾಪನೆ ಮಾಡಲು ಕ್ರೇನ್ ಮೂಲಕ ಗೋಪುರ ತುತ್ತತುದಿಗೆ ಹೋಗುವ ವೇಳೆ ಕ್ರೇನ್ನ ಬಕೆಟ್ ಮುರಿದು ಓರ್ವ ಸಾವನ್ನಪ್ಪಿದ್ದು. ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಹಾವೇರಿಯ ಶೇಷಗಿರಿ ಗ್ರಾಮದಲ್ಲಿರುವ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ವೇಳೆ ಅವಘಡ ನಡೆದಿದ್ದು. ಕ್ರೇನ್ ಮೂಲಕ ಕಳಸ ಸ್ಥಾಪನೆಗೆ ಎಂದು ದೇವಾಲಯದ ಮೇಲೆ ಏರುವಾಗ ಕ್ರೇನ್ ಬಕೆಟ್ ಕಟ್ ಆಗಿ ಅಪಘಡ ಸಂಭವಿಸಿದೆ. ಕ್ರೇನ್ ಮೇಲಿಂದ ಬಿದ್ದು ಗ್ರಾಮದ ಮಂಜುನಾಥ ಪಾಟೀಲ (48) ಎಂಬಾತ ಮೃತ ಪಟ್ಟಿದ್ದು. ಮಂಜು ಬಡಿಗೇರ್ ಎಂಬಾತ ಗಾಯಗೊಂಡಿದ್ದಾನೆ.
ಇದನ್ನೂ ಓದಿ :ಭೀಕರ ರಸ್ತೆ ಅಪಘಾತ: 6 ಜನ ಸಾ*ವು, 15ಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಗಾಯಾಳುವನ್ನು ಹಾನಗಲ್ಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು. ಆಡೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.