ಕೃಷ್ಣಗಿರಿ: 13 ವರ್ಷದ ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷ್ಣಗಿರಿ ಜಿಲ್ಲೆಯ ಸರ್ಕಾರಿ ಶಾಲೆಯ ಮೂವರು ಶಿಕ್ಷಕರನ್ನು ಬುಧವಾರ ಬಂಧಿಸಲಾಗಿದೆ.
ಮಂಗಳವಾರ ಮುಖ್ಯೋಪಾಧ್ಯಾಯಿನಿ ಬಾಲಕಿ ಶಾಲೆಗೆ ಸ್ವಲ್ಪ ಸಮಯದಿಂದ ಗೈರುಹಾಜರಾಗಿದ್ದ ಕಾರಣ ಆಕೆಯ ಮನೆಗೆ ಭೇಟಿ ನೀಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಬಾಲಕಿಯ ಪೋಷಕರು ಆಕೆಯ ಮೇಲೆ ಮೂವರು ಶಿಕ್ಷಕರು ಸಾಮೂಹಿಕ ಅತ್ಯಾಚಾರ ನಡೆಸಿSchದ್ದಾರೆ ಎಂದು ಮುಖ್ಯೋಪಾಧ್ಯಾಯಿನಿ ಅವರಿಗೆ ತಿಳಿಸಿದ್ದಾರೆ. ಕೃತ್ಯದ ಕುರಿತು ತಿಳಿದ ಮುಖ್ಯಪಾಧ್ಯಾಯಿನಿ ಅದೇ ರಾತ್ರಿ ಜಿಲ್ಲಾ ಚೈಲ್ಡ್ ಲೈನ್‌ಗೆ ದೂರು ನೀಡಿದ್ದು. ಅಧಿಕಾರಿಗಳು ಬಾಲಕಿಯ ಮನೆಗೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :3 ಸಾವಿರಕ್ಕೆ ವಾರ್ಷಿಕ ಟೋಲ್ ಪಾಸ್: ಮಧ್ಯಮ ವರ್ಗಕ್ಕೆ ಮತ್ತೊಂದು ಗಿಫ್ಟ್ ಕೊಡುತ್ತಾ ಮೋದಿ ಸರ್ಕಾರ !
ಶಿಕ್ಷಕರಲ್ಲಿ ಒಬ್ಬರು ಮೊದಲು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ನಂತರ ಇತರ ಇಬ್ಬರಿಗೆ ಈ ವಿಷಯ ತಿಳಿದುಬಂದಾಗ ಅವರು ಮತ್ತೆ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
“ತನಿಖೆಯ ನಂತರ ನಾವು ಮೂವರು ಆರೋಪಿಗಳನ್ನು ಬಂಧಿಸಿದ್ದೇವೆ” ಎಂದು ಕೃಷ್ಣಗಿರಿ ಎಸ್‌ಪಿ ಪಿ. ತಂಗದುರೈ ಹೇಳಿದರು. ಮೂವರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಆರೋಪಗಳನ್ನು ದಾಖಲಿಸಲಾಗಿದೆ. ಅವರನ್ನ ಸೇವೆಯಿಂದ ಅಮಾನತುಗೊಳಿಸಲಾಗಿದೆ.