Thursday, February 6, 2025

ಅಧ್ಯಕ್ಷನಾಗಿ ಅನುಭವದ ಕೊರತೆ ಇದೆ, ಆದರೆ ಕಾರ್ಯಕರ್ತನಾಗಿ ಅಲ್ಲ: ವಿಜಯೇಂದ್ರ

ಬೆಂಗಳೂರು : ನಗರದಲ್ಲಿ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ‘ ನನಗೆ ರಾಜ್ಯಧ್ಯಕ್ಷನಾಗಿ ಅನುಭವದ ಕೊರತೆ ಇರಬಹುದು, ಆದರೆ ಕಾರ್ಯಕರ್ತನಾಗಿ ಅನುಭವ ಇದೆ. ಈ ಕುರಿತು ನನಗೆ ಹೆಮ್ಮೆ, ಸಂತೋಷ ಇದೆ ಎಂದು ಹೇಳಿದರು.

ಬಿಜೆಪಿಯಲ್ಲಿನ ಒಳಜಗಳ ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದ್ದು. ಯತ್ನಾಳ್​ ಬಣ ದೆಹಲಿಗೆ ಹೋಗಿ ರಾಜ್ಯಧ್ಯಕ್ಷ ಬದಲಾಯಿಸಬೇಕು ಎಂದು ಹೈಕಮಾಂಡ್​ ಮೇಲೆ ಒತ್ತಡ ತರುತ್ತಿದೆ. ಇದರ ನಡುವೆ ರಾಜ್ಯದಲ್ಲಿ ವಿಜಯೇಂದ್ರ ಸುದ್ದಿಗೋಷ್ಟಿ ನಡೆಸಿ ಭಿನ್ನರಿಗೆ ತಿರುಗೇಟಿ ನೀಡಿದ್ದಾರೆ. ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿಜಯೇಂದ್ರ ‘ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಯಾವಾಗ ಬೇಕಾದರು ಆಗಬಹುದು, 20ರೊಳಗೆ ಬರಬಹುದು ಅಂತ ಇದೆ. ಈ ಕುರಿತುಕೆಲವು ನಾಯಕರ‌ ಹೇಳಿಕೆ ಕೇಳಿದ್ದೇನೆ.ಇನ್ನು ಕೆಲವರು ಮನಸ್ಸಿಗೆ ಬಂದ ಹೇಳಿಕೆ ನೀಡುತ್ತಿದ್ದಾರೆ. ಈ ಹೇಳಿಕೆಗಳಿಗೆ ನಾನು ಪ್ರತಿಕ್ರಿಯೆ ನೀಡಲ್ಲ, ನಾನು ಹೇಳಿಕೆ ನೀಡಿದರ ಪಕ್ಷಕ್ಕೆ ಮುಜುಗರ ಆಗುತ್ತದೆ ಎಂದು ಹೇಳಿದರು.

ಇದನ್ನೂ ಓದಿ :ತಮಿಳು ನೆಲದಲ್ಲಿ ಅಮಾನವೀಯ ಕೃತ್ಯ: ವಿದ್ಯಾರ್ಥಿನಿ ಮೇಲೆ ಮೂವರು ಶಿಕ್ಷಕರಿಂದ ಸಾಮೂಹಿಕ ಅತ್ಯಾಚಾರ

ಮುಂದುವರಿದು ಮಾತನಾಡಿದ ವಿಜಯೇಂದ್ರ ‘ ಶ್ರೀರಾಮುಲು ನನಗೆ ಅನುಭವದ ಕೊರತೆ ಇದೆ ಎಂದು ಹೇಳಿದ್ದಾರೆ. ಅಧ್ಯಕ್ಷನಾಗಿ ಅನುಭವದ ಕೊರತೆ ಇರಬಹುದು, ಅದನ್ನು ನಾನು ಒಪ್ಪುತ್ತೇನೆ. ನನಗೆ ಅವರಷ್ಟು ಅನುಭವ ಇಲ್ಲ.ಆದರೆ ಕಾರ್ಯಕರ್ತನಾಗಿ ನನ್ನದೇ ಅನುಭವ ಇದೆ. ಈ ಕುರಿತು ನನಗೆ ಹೆಮ್ಮೆ ಸಂತೋಷ ಇದೆ.
ರಾಜ್ಯ ಪ್ರವಾಸ ಮಾಡುವಾಗ ವಿಜಯಣ್ಣ ಎಂದು ಕರೆಯುತ್ತಾರೆ. ನನ್ನ ಕಾರ್ಯವೈಕರಿ ಬಗ್ಗೆ ಅವರಿಗೂ ತೃಪ್ತಿ ಇದೆ ಎಂದು ಹೇಳಿದರು.

ಯಡಿಯೂರಪ್ಪನವರ ಬಗ್ಗೆ ಮಾತನಾಡಿದರೆ ಸಹಿಸಲ್ಲ !

ಯತ್ನಾಳ್​ ಮತ್ತು ಇತರ ಭಿನ್ನಮತಿಯರು ಬಿಎಸ್​ವೈ ಬಗ್ಗೆ ಹೇಳಿಕೆ ನೀಡುವ ಕುರಿತು ಮಾತನಾಡಿದ ವಿಜಯೆಂದ್ರ ‘ನನ್ನ ಬಗ್ಗೆ ಮಾತನಾಡಿದರೆ ಸಹಿಸಿಕೊಳ್ತೇನೆ, ಆದರೆ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ರೆ ಸುಮ್ಮನಿರಲ್ಲ. ಅವರು ಹೋರಾಟದ ಮೂಲಕ ಪಕ್ಷ ಕಟ್ಟಿದಾರೆ. ಆದರೆ ಅವರನ್ನ ಅವಮಾನಿಸುವ ಕೆಲಸ ಆಗ್ತಿದೆ. ಅವರ ಹೇಳಿಕೆಗಳನ್ನ ನಾನು ಸಹಿಸಲ್ಲ, ಅವರಿಗೆ ಹೇಳುವ ಪ್ರಯತ್ನ ಮಾಡದಿರುವುದು ದುರ್ದೈವ.

ಇದನ್ನೂ ಓದಿ :3 ಸಾವಿರಕ್ಕೆ ವಾರ್ಷಿಕ ಟೋಲ್​ ಪಾಸ್​: ಮಧ್ಯಮ ವರ್ಗಕ್ಕೆ ಮತ್ತೊಂದು ಗಿಫ್ಟ್​​ ಕೊಡುತ್ತಾ ಮೋದಿ ಸರ್ಕಾರ !

ನಾವೆಲ್ಲಾ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತನಾಡಬೇಕು, ಅದನ್ನ ಬಿಟ್ಟು ಈರೀತಿ ಮಾತನಾಡೋದು ಸರಿಯಲ್ಲ. ವಿಜಯೇಂದ್ರನಿಗೆ ಅಪಮಾನ ಮಾಡಿದರೆ ನಾನು ಸಹಿಸಿಕೊಳ್ಳುತ್ತೇನೆ, ಆದರೆ
ಕಾರ್ಯಕರ್ತರಿಗೆ ಅಪಮಾನ ಮಾಡಿದರೆ ನಾನು ಸಹಿಸಲ್ಲ. ದಿನಬೆಳಗಾದರೆಈ ರೀತಿ ಹೇಳಿಕೆ ನೀಡುವುದು ಸರಿಯಲ್ಲ. ಈಗಲಾದರೂ ಯಡಿಯೂರಪ್ಪನವರ ವಿರುದ್ದ ಹೇಳಿಕೆ ಕೊಡುವವರ ವಿರುದ್ದ ಕ್ರಮ ಜರುಗಿಸಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES