Thursday, April 3, 2025

KSRTC ಬಸ್​ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ!

ರಾಯಚೂರು : KSRTC ಬಸ್​ನ ಆ್ಯಕ್ಸಲ್​ ಕಟ್​​ ಆಗಿ ಬಸ್​ ಪಲ್ಟಿಯಾಗಿರುವ ಘಟನೆ ರಾಯಚೂರಿನಲ್ಲಿ ನಡೆದಿದ್ದು. ಬಸ್​ನಲ್ಲಿ 33 ಜನ ವಿದ್ಯಾರ್ಥಿಗಳು ಸೇರಿದಂತೆ 77 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ರಾಯಚೂರು ಜಿಲ್ಲೆ ಲಿಂಗಸೂಗೂರು ತಾಲ್ಲೂಕಿನ ಮುದಗಲ್ ಬಳಿ ಘಟನೆ ನಡೆದಿದ್ದು. ಸುಮಾರು 77 ಜನ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ KSRTC ಬಸ್ ಪಲ್ಟಿಯಾಗಿದೆ. ಲೆಕ್ಕಿಹಾಳ ಗ್ರಾಮದಿಂದ ಲಿಂಗಸಗೂರು ಕಡೆಗೆ ಹೊರಟ್ಟಿದ್ದ ಕೆಎಸ್​ಆರ್​ಟಿಸಿ ಬಸ್​ ಪಲ್ಟಿಯಾಗಿ ಘಟನೆ ನಡೆದಿದೆ. 77 ಪ್ರಯಾಣಿಕರ ಪೈಕಿ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಇದನ್ನೂ ಓದಿ :ಅಧ್ಯಕ್ಷನಾಗಿ ಅನುಭವದ ಕೊರತೆ ಇದೆ, ಆದರೆ ಕಾರ್ಯಕರ್ತನಾಗಿ ಅಲ್ಲ: ವಿಜಯೇಂದ್ರ

ಅಪಘಾತದ ರಭಸಕ್ಕೆ ಬಸ್​ ಸಂಪೂರ್ಣ ಜಖಂ ಆಗಿದ್ದು. ನಿರ್ವಹಣೆಯ ಕೊರತೆಯಿಂದ ಬಸ್​ ಆ್ಯಕ್ಸಲ್​​ ಕಟ್​ ಆಗಿರುವ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಘಟನಾ ಸ್ಥಳಕ್ಕೆ ಮುದಗಲ್​ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES