Thursday, February 6, 2025

ರಾಜ್ಯ ಬಿಜೆಪಿಯಲ್ಲಿ ಒಳಜಗಳ, ಮೋದಿ ತೀರ್ಮಾನವೇ ಅಂತಿಮ: ಬಸವರಾಜ್​ ಬೊಮ್ಮಾಯಿ

ರಾಜ್ಯ ಬಿಜೆಪಿ ಒಳಜಗಳ ಕ್ಲೈಮ್ಯಾಕ್ಸ್​ ಹಂತಕ್ಕೆ ತಲುಪಿದ್ದು. ಇನ್ನೇನು ಕೆಲವೆ ದಿನಗಳಲ್ಲಿ ಇದಕ್ಕೆಲ್ಲಾ ಪುಲ್​​ ಸ್ಟಾಪ್​ ದೊರೆಯಲಿದೆ ಎಂದು ತಿಳಿದು ಬಂದಿದೆ. ಇದರ ಬೆನ್ನಲ್ಲೆ ರಾಜ್ಯ ಬಿಜೆಪಿ ನಾಯಕರನ್ನು ಹೈಕಮಾಂಡ್​ ದೆಹಲಿಗೆ ಬರಲೇಳಿದ್ದು. ಅಶೋಕ್​ ಮತ್ತು ಬಸವರಾಜ್​ ಬೊಮ್ಮಾಯಿ ಶೀಘ್ರದಲ್ಲೆ ದೆಹಲಿಗೆ ಪ್ರಯಾಣ ಬೆಳಸಲಿದ್ದಾರೆ. ಇದರ ನಡುವೆ ಮಾಜಿ ಸಿಎಂ ಬೊಮ್ಮಾಯಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

ಪಕ್ಷದ ಆಂತರಿಕ ಕಚ್ಚಾಟದ ಕುರಿತು ಬಸವರಾಜ್​ ಬೊಮ್ಮಾಯಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು. ‘ಪಕ್ಷದಲ್ಲಿನ ಈ ಅಂತಕರಿಕ ಕಚ್ಚಾಟ ದುರದೃಷ್ಟಕರ. ಜನಸಾಮಾನ್ಯರ ಸಂಕಷ್ಟದ ಸಮಯದಲ್ಲಿ ನಾವು ಸರ್ಕಾರದ ವಿರುದ್ದ ಹೋರಾಟ ಮಾಡಬೇಕು. ಆದರೆ ನಮ್ಮ ನಮ್ಮ ನಡುವೆಯೇ ಮಾತಿನ‌ ಸಮರ ನಡೆಯುತ್ತಿರೋದು ದುರದೃಷ್ಟಕರ.

ಇದನ್ನೂ ಓದಿ :ನಿರ್ಮಾಣ ಹಂತದ ಕಟ್ಟಡಕ್ಕೆ ಬೆಂಕಿ: ಇಬ್ಬರು ಕಾರ್ಮಿಕರು ಸಾ*ವು

ದೇಶಕ್ಕೆ ಸಮರ್ಥ ನಾಯಕತ್ವ ಕೊಟ್ಟಿರೋ ಪ್ರಧಾನಿ ಮೋದಿಯವರ ತೀರ್ಮಾನವೇ ಅಂತಿಮ. ನಾನು ಯಾವುದೇ ಗುಂಪುಗಾರಿಕೆಯಲ್ಲಿ ಸೇರಿದವನಲ್ಲ. ನಾವು ಎಲ್ಲಾರನ್ನ ಒಂದುಗೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ. ಇದೀಗ ಎಲ್ಲಾದಕ್ಕೂ ಅಂತಿಮ ತೆರೆ ಎಳೆಯಬೇಕು. ಹೀಗಾಗಿ ರಾಜ್ಯದ ಬಿಜೆಪಿಯ ಸರ್ವ ಶ್ರೇಷ್ಠ ನಾಯಕ ಬಿಎಸ್ ವೈ ನೇತೃತ್ವದಲ್ಲಿ ಕೂತು ಸಮಸ್ಯೆಯನ್ನ ಬಗೆಹರಿಸಬೇಕಿದೆ ಎಂದು ಪ್ರಕಟನೆ ಹೊರಡಿಸಿದ್ದಾರೆ.

RELATED ARTICLES

Related Articles

TRENDING ARTICLES