Thursday, August 28, 2025
HomeUncategorizedನಾನು ಬಿಎಸ್ಸಿ ಪದವೀಧರ, ಕನ್ನಡ ಇಂಗ್ಲೀಷ್ ಓದಿ ಬರೆಯಬಲ್ಲೆ: ಸಚಿವ ಶಿವರಾಜ್​ ತಂಗಡಗಿ

ನಾನು ಬಿಎಸ್ಸಿ ಪದವೀಧರ, ಕನ್ನಡ ಇಂಗ್ಲೀಷ್ ಓದಿ ಬರೆಯಬಲ್ಲೆ: ಸಚಿವ ಶಿವರಾಜ್​ ತಂಗಡಗಿ

ಕೊಪ್ಪಳ : ಇತ್ತೀಚೆಗೆ ಶಾಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್​ ತಂಗಡಗಿ ಕಪ್ಪು ಹಲಗೆ ಮೇಲೆ ಶುಭವಾಗಲಿ ಎಂದು ಬರೆಯಲು ಪರದಾಡಿದ್ದ ವಿಡಿಯೋ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಇದೀಗ ಸಚಿವ ತಂಗಡಗಿ ಇದಕ್ಕೆ ಸ್ಪಷ್ಟನೆ ನೀಡಿದ್ದು. ನಾನೂ ಬಿಎಸ್ಸಿ ಪದವೀಧರ, ನನಗೆ ಕನ್ನಡ ಇಂಗ್ಲೀಷ್​ ಓದಲು ಬರೆಯಲು ಬರುತ್ತೆ ಎಂದು ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತ ಇಲಾಖೆ‌ ಸಚಿವರಿಗೆ ಕನ್ನಡ ಬರೋಲ್ಲ ಎಂಬ ವಿಡಿಯೋ ವೈರಲ್ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಶಿವರಾಜ್ ತಂಗಡಗಿ ‘ನಾನು ತಪ್ಪಾಗಿ ಬರೆದಿಲ್ಲ..‌ಬರೆಯುವುದು ವಿಳಂಬವಾಗಿದೆ. ನನ್ನ ಮನಸ್ಸಲ್ಲಿ ಬೇರೆ ಪದ ಬರಿಬೇಕು ಅನ್ಕೊಂಡಿದ್ದೆ.  ಆದರೆ ಅಲ್ಲಿದ್ದ ಅಧಿಕಾರಿಗಳು ಶುಭವಾಗಲಿ ಎಂದು ಬರೆಯಿರಿ ಎಂದು ಹೇಳಿದರು. ಅದನ್ನು ಬರೆಯುವಾಗ ‘ಭ’ ಅಕ್ಷರಕ್ಕೆ ಕೊಂಬು ಕೊಟ್ಟಿಲ್ಲ. ಅದೊಂದು ತಪ್ಪಾಗಿದೆ, ಅದನ್ನು ನಾನು ಒಪ್ಪಕೊಳ್ಳುತ್ತೇನೆ.

ಇದನ್ನೂ ಓದಿ :ಅಮೆರಿಕದಿಂದ ಗಡಿಪಾರಾದ ಭಾರತೀಯರ ಕೈಗೆ ಕೋಳ ಹಾಕಿ ಅವಮಾನ: ಕಾಂಗ್ರೆಸ್‌ ಕಿಡಿ

ಆದರೆ ಅದು ಬಿಟ್ಟು ತಂಗಡಗಿಗೇ ಕನ್ನಡಾನೇ ಬರೋಲ್ಲ ಅನ್ನೋದು ಎಷ್ಟು ಸರಿ. ಬಿಜೆಪಿಯವರು ನನ್ನನ್ನು ಸಿಕ್ಕಿ ಹಾಕಿಸಿಬೇಕು ಎಂದು ಕಾಯುತ್ತಿದ್ದಾರೆ. ಆದರೆ ಅವರಿಗೆ ಬೇರೆ ಏನು ಸಿಗದ ಕಾರಣ ಇದನ್ನು ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿದ್ದಾರೆ. ನಾನೂ ಕೂಡ ಬಿಎಸ್ಸಿ ಪಧವೀದರ, ಕನ್ನಡ, ಇಂಗ್ಲೀಷ್​​ ಓದಿ ಬರೆಯಬಲ್ಲೆ. ಈ ವಿಡಿಯೋವನ್ನು ವೈರಲ್​ ಮಾಡಿದವನ ಮರ್ಯಾದೆ ಕಳೆಯುವ ಕೆಲಸವನ್ನು ನಾನು ಮಾಡೋಲ್ಲ್ ಎಂದು ಪರೋಕ್ಷವಾಗಿ ಮಾಜಿ ಶಾಸಕ ಬಸವರಾಜ್​ ದಡೇಸೂಗೂರಿಗೆ ಟಾಂಗ್​ ನೀಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments