ಬೆಂಗಳೂರು : ಹೆಂಡತಿ ಮೇಲೆ ಕಣ್ಣಾಕಿದ್ದ ಸ್ನೇಹಿತನಿಗೆ ಲಾಂಗ್ನಿಂದ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು. ಹಲ್ಲೆಗೊಳಗಾದ ಯುವಕನನ್ನು 30 ವರ್ಷದ ಕಿರಣ್ ಎಂದು ಗುರುತಿಸಲಾಗಿದೆ. ಹಲ್ಲೆ ನಡೆಸಿದ ಯುವಕನನ್ನು ಅರ್ಜುನ್ ಎಂದು ಗುರುತಿಸಲಾಗಿದೆ.
ಕಿರಣ್ ಹಾಗೂ ಅರ್ಜುನ್ ಇಬ್ಬರು ಸ್ನೇಹಿತರೇ, ಆದರೆ ಅರ್ಜುನ್ ಪತ್ನಿ ಮೇಲೆ ಕಿರಣ್ ಕಣ್ಣಾಕಿದ್ದನು. ಅರ್ಜುನ್ ಪತ್ನಿಗೆ ಪದೇ ಪದೇ ಮೆಸೇಜ್, ಕರೆ ಮಾಡುತ್ತಿದ್ದ ಕಿರಣ್ ಆಕೆಯೊಂದಿಗೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದನು. ಇದನ್ನು ಗಮನಿಸಿದ್ದ ಅರ್ಜುನ್, ಕಿರಣ್ ಮೇಲೆ ಕೋಪಗೊಂಡಿದ್ದನು. ಇದೇ ಕಾರಣಕ್ಕೆ ಫೆಬ್ರವರಿ 4ರ ಸಂಜೆ ಗಾಣಿಗರ ಪಾಳ್ಯ ಗೌರಿಶಂಕರ ಬಾರ್ ಗೆ ಕಿರಣ್ ನನ್ನ ಕುಡಿಯಲು ಕರೆದುಕೊಂಡು ಬಂದಿದ್ದ.
ಇದನ್ನೂ ಓದಿ: ನಾನು ಬಿಎಸ್ಸಿ ಪದವೀಧರ, ಕನ್ನಡ ಇಂಗ್ಲೀಷ್ ಓದಿ ಬರೆಯಬಲ್ಲೆ: ಸಚಿವ ಶಿವರಾಜ್ ತಂಗಡಗಿ
ಮನೆಯಿಂದ ಬರ್ತಾ ಒಂದು ಲಾಂಗ್ ಕೂಡ ತಂದಿದ್ದ ಅರ್ಜುನ್, ಕಿರಣ್ಗೆ ಕಂಠ ಪೂರ್ತಿ ಕುಡಿಸಿ ಲಾಂಗ್ನಿಂದ ಹಲ್ಲೆ ಮಾಡಿದ್ದಾನೆ. ಕಿರಣ್ ಕುತ್ತಿಗೆ ಭಾಗಕ್ಕೆ ಅರ್ಜುನ್ ಬಲವಾಗಿ ಹೊಡೆದಿದ್ದು. ಗಂಭೀರವಾಗಿ ಗಾಯಗೊಂಡಿರುವ ಕಿರಣ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಆರೋಪಿ ಅರ್ಜುನ್ನನ್ನು ತಲಘಟ್ಟಪುರ ಪೊಲೀಸರು ವಶಕ್ಕೆ ಪಡೆದಿದ್ದು. ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಡಿಸಿಪಿ ಲೋಕೆಶ್ ಜಗಲಾಸರ್ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.