ಬೆಂಗಳೂರು : ನಿರ್ಮಾಣ ಹಂತದ ಕಟ್ಟಡಕ್ಕೆ ಬೆಂಕಿ ಬಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ, ಸೀಗೆಹಳ್ಳಿ ಗ್ರಾಮದಲ್ಲಿ ನಡೆದಿದ್ದು. ಓರ್ವ ಕಾರ್ಮಿಕನನ್ನು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಬೆಂಗಳೂರಿನ, ಮಾಗಡಿ ರಸ್ತೆಯ, ಸೀಗೆಹಳ್ಳಿ ಗ್ರಾಮದಲ್ಲಿರುವ ಶಿವಾನಿ ಗ್ರೀನ್ಸ್ ಎಂಬ ಲೇಔಟ್ನಲ್ಲಿ ಘಟನೆ ನಡೆದಿದ್ದು. ಸತೀಶ್ ಎಂಬವವರಿಗೆ ಸೇರಿದ್ದ ಬಿಲ್ಡಿಂಗ್ ಬೆಂಕಿಗಾಹುತಿಯಾಗಿದೆ. ಕಟ್ಟಡದ ನಿರ್ಮಾಣ ಕಾರ್ಯ ಬಹುತೇಕ ಮುಗಿದಿದ್ದು. ವುಡ್ವರ್ಕ್ ಕಾರ್ಯ ನಡೆಯುತ್ತಿತ್ತು. ಈ ವೇಳೆ ಕೆಲಸಗಾರರು ಬಳಸುತ್ತಿದ್ದ ಸಿಲಿಂಡರ್ ಸೋರಿಯಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :KSRTC ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ!
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಓರ್ವ ಕಾರ್ಮಿಕ ಕಟ್ಟಡದ ಮೇಲಿನ ನೀರಿನ ಟ್ಯಾಂಕ್ ಮೇಲೆ ಕುಳಿತು ಜೀವ ಉಳಿಸಿಕೊಂಡಿದ್ದಾನೆ. ಆದರೆ ದುರಾದೃಷ್ಟವಶಾತ್ ಕಟ್ಟಡದೊಳಗೆ ಸಿಲುಕಿದ ಇಬ್ಬರು ಉತ್ತರ ಭಾರತ ಮೂಲದ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಉತ್ತರ ಪ್ರದೇಶ ಮೂಲದ ಉದಯ್ ಭಾನು ಮತ್ತು 23 ವರ್ಷದ ರೋಷನ್ ಎಂದು ಗುರುತಿಸಲಾಗಿದೆ.