Wednesday, April 2, 2025

ಹೆಂಡತಿ ತವರಿಗೆ ಹೋದ ಖುಷಿಯಲ್ಲಿ ಬಿಸ್ಕೆಟ್​ ಹಂಚಿ ಸಂಭ್ರಮಿಸಿದ ಆಟೋ ಡ್ರೈವರ್​

ಬೆಂಗಳೂರು: ಆಟೋ ಚಾಲಕನೊಬ್ಬ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಕ್ಕೆ ತನ್ನ ಆಟೋದಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಉಚಿತ ಬಿಸ್ಕೆಟ್​ ವಿತರಿಸಿ ಸಂಭ್ರಮಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿವೆ.

ಹೌದು..ತನ್ನ ಹೆಂಡತಿ ಆಕೆಯ ಅಮ್ಮನ ಮನೆಗೆ ಹೋದ ಖುಷಿ ತಾಳಲಾರದೆ ಆಕೆಯ ಗಂಡ ಊರ ತುಂಬೆಲ್ಲ ಈ ವಿಚಾರವನ್ನು ಢಂಗುರ ಸಾರಿದ್ದಾನೆ. ನನ್ನ ಹೆಂಡತಿ ತವರು ಮನೆಗೆ ಹೋಗಿರುವುದರಿಂದ ನಾನು ಬಹಳ ಸಂತೋಷವಾಗಿದ್ದೇನೆ ಎಂದು ಬೋರ್ಡ್​ವೊಂದನ್ನು ತನ್ನ ಆಟೋದಲ್ಲಿ ಬರೆದು ಹಾಕಿರುವ ಆತ ಅದೇ ಖುಷಿಯಲ್ಲಿ ತನ್ನ ಆಟೋದಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೂ ಉಚಿತ ಬಿಸ್ಕತ್ ವಿತರಿಸಿದ್ದಾನೆ.

ಇದನ್ನೂ ಓದಿ :ಹೊಟ್ಟೆಗೆ ಹಿಟ್ಟಿಲ್ಲದೆ, ಸ್ಮಶಾಣದ ಮುಂದೆ ಭಿಕ್ಷೆ ಬೇಡುವ ಸ್ಥಿತಿಗೆ ಬಂದ ಬಿಜೆಪಿ ನಾಯಕ

ಈ ವಿಡಿಯೋವನ್ನು ಆಟೋದಲ್ಲಿ ಪ್ರಯಾಣಿಸಿರುವ ಪ್ರಯಾಣಿಕರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಆಟೋ ಚಾಲಕ ತನ್ನ ಹೆಂಡತಿ ತವರು ಮನೆಗೆ ಹೋಗಿದ್ದಾಳೆ ಎಂದು ಕನ್ನಡ ಮತ್ತು ಇಂಗ್ಲೀಷ್​ ಎರಡು ಭಾಷೆಯಲ್ಲಿ ಬರೆಯಲಾಗಿದೆ. ಈ ವಿಡಿಯೋಗೆ ಹಲವರು ಕಾಮೆಂಟ್​ ಮಾಡಿದ್ದು. ಇದರಲ್ಲಿ ಕೆಲವರು ಸ್ವಾತಂತ್ರ್ಯ ದಿನದ ಶುಭಾಷಯ ಎಂದು ಶುಭಕೋರಿದ್ದಾರೆ.

RELATED ARTICLES

Related Articles

TRENDING ARTICLES