ತಮಿಳುನಾಡು : ಕನ್ಯಾಕುಮಾರಿ ಜಿಲ್ಲೆಯ ವಿಲ್ಲು ಕುರಿ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬಳು ಮನೆ ಮಾರಾಟ ಮಾಡಿದ ಹಣದ ಸಮೇತ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಇತ್ತ ಮನೆ ಹಾಗೂ ಮಡದಿ ಇಲ್ಲದೆ ಕಂಗಾಲಾದ ಗಂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮೃತ ಗಂಡನನ್ನು 47 ವರ್ಷದ ಬೆಜಂಮಿನ್ ಎಂದು ಗುರುತಿಸಲಾಗಿದೆ.
ಹೌದು.. ಬೆಂಜಮಿನ್ ತನ್ನ ಕುಟುಂಬದ ನಿರ್ವಹಣೆಗೆ ಎಂದು ಸೌದಿಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಈತನ ಪತ್ನಿ ಸುನೀತಾ(45) ಕನ್ಯಾಕುಮಾರಿಯಲ್ಲಿ ವಾಸವಿದ್ದಳು. ಇವರಿಬ್ಬರು ಕಳೆದ 19 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ ಇವರಿಗೆ ಇಲ್ಲಿಯವರೆಗೂ ಮಕ್ಕಳಿರಲಿಲ್ಲ. ಬೆಂಜಮಿನ್ ವಿದೇಶದಲ್ಲಿದ್ದಕೊಂಡು ಸಂಪಾದಿಸಿದ್ದ ಹಣವನ್ನು ಪ್ರತಿ ತಿಂಗಳು ಪತ್ನಿಗೆ ಕಳುಹಿಸುತ್ತಿದ್ದನು. ಆದರೆ ಇಲ್ಲಿ ಪತ್ನಿ ಆ ಹಣದೊಂದಿಗೆ ಪ್ರಿಯಕರನೊಂದಿಗೆ ಜಾಲಿ ಮಾಡುತ್ತಿದ್ದಳು.
ಇದೇ ವಿಚಾರಕ್ಕೆ ಇವರಿಬ್ಬರ ನಡುವೆ ಅನೇಕ ಬಾರಿ ಜಗಳವೂ ಕೂಡ ನಡೆದಿತ್ತು. ಈ ಮಧ್ಯೆ, ಕೊನ್ನಕ್ಕುಳಿವಿಲೈನಲ್ಲಿರುವ ಕುಟುಂಬದ ಮನೆಯನ್ನು ಬೆಂಜಮಿನ್ ಮಾರಾಟ ಮಾಡಿದ್ದ. ಬಳಿಕ ಪಕ್ಕದ ಮನಕವಿಲೈನಲ್ಲಿ ಮನೆ ಕಟ್ಟಿಕೊಂಡು ತನ್ನ ಹೆಂಡತಿಯೊಂದಿಗೆ ವಾಸಿಸುತ್ತಿದ್ದ. ಆದರೆ ಕೆಲ ತಿಂಗಳ ಹಿಂದೆ ಬೆಂಜಮಿನ್ ಕೂಡ ವಿದೇಶಕ್ಕೆ ತೆರಳಿದ್ದನು. ಇದರ ನಡುವೆ ಸುನೀತಾ ಕೂಡ ಮನೆ ಬಿಟ್ಟು ಹೋಗಿದ್ದಳು. ಈ ವಿಷಯವನ್ನು ಆಕೆಯ ಸಂಬಂದಿಕರು ಬೆಂಜಮಿನ್ಗೆ ವಿಷಯ ತಿಳಿಸಿದ್ದರು. ವಿಷಯ ತಿಳಿದು ವಾಪಾಸು ಬಂದ ಬೆಂಜಮಿನ್ ಇರಾನಿಯಲ್ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದಾರೆ.
ಇದರ ನಡುವೆ ಬುಧವಾರ ಬೆಂಜಮಿನ್ ಅವರು ತನ್ನ ಮಣಕ್ಕವಿಲ್ಕೆ ಮನೆಯಲ್ಲಿ ವಿಷ ಸೇವಿಸಿದರು. ಕೂಡಲೇ ಅವರನ್ನು ಆಸರಿಪಲ್ಲಂ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬೆಂಜಮಿನ್ ಸಾವಿಗೀಡಾಗಿದ್ದಾರೆ. ಸಾವಿಗೂ ಮುನ್ನ ಬೆಂಜಮಿನ್ ವಿಡಿಯೋವನ್ನು ಪೊಸ್ಟ್ ಮಾಡಿದ್ದಾರೆ.
ಇದನ್ನೂ ಓದಿ : ಬೈಕ್ನಲ್ಲಿ ತೆರಳುವಾಗ ಆನೆ ದಾಳಿ: ಜರ್ಮನ್ ಪ್ರವಾಸಿಗ ಸಾ*ವು
ವಿಡಿಯೋದಲ್ಲಿ ಏನಿದೆ !
ಸಾಯುವ ಮುನ್ನ ಪೊಲೀಸರಿಗೆ ವಿಡಿಯೋವೊಂದನ್ನು ಪೋಸ್ಟ್ ಮಾಡಿರುವ ಬೆಂಜಮಿನ್ ‘ಎಸ್ಪಿ ಸರ್, ನಾನು ನನ್ನ ಹೆಂಡತಿಯನ್ನು 19 ವರ್ಷಗಳ ಕಾಲ ರಾಣಿಯಂತೆ ನಡೆಸಿಕೊಂಡೆ. ನಾನು ನನ್ನ ಕುಟುಂಬದೊಂದಿಗೆ ಬೇರೆ ಮನೆಯಲ್ಲಿದ್ದೆ. ಆಗಲೇ ಆಕೆಗೆ ಅನೈತಿಕ ಸಂಬಂಧವಿತ್ತು. ಆದರೆ ಇದೀಗ ಮನೆಯನ್ನು 33 ಲಕ್ಷ ರೂಗೆ ಮಾರಿ ಹಣದೊಂದಿಗೆ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ. ಆಕೆಯನ್ನು ಸುಮ್ಮನೆ ಬಿಡಬೇಡಿ. ನನ್ನ ಸಾವಿಗೆ ಕಾರಣವಾದ ಅವರಿಗೆ ಮರಣದಂಡನೆ ನೀಡಿ, ಅದನ್ನು ನಾನು ಮೇಲಿನಿಂದ ನೋಡುತ್ತೇನೆ ಎಂದು ಹೇಳಿದ್ದಾನೆ.
ನನ್ನ ಹೆಂಡತಿ, ಮನೆಯನ್ನು 33 ಲಕ್ಷ ರೂ.ಗೆ ಮಾರಿದ್ದೇನೆ ಎಂದು ಹೇಳಿದಳು. ಹಣದೊಂದಿಗೆ ಪರಾರಿಯಾಗಿದ್ದಾಳೆ. ಅವರನ್ನು ಮಾತ್ರ ಬಿಡಬೇಡಿ. ಸೈಜು, ಸುನೀತಾ ಹಾಗೂ ಶೀಲಾ ನನ್ನ ಸಾವಿಗೆ ಕಾರಣ. ನನ್ನ ಸಾವಿಗೆ ಕಾರಣರಾದವರಿಗೆ ಮರಣದಂಡನೆ ವಿಧಿಸಿ. ನಾನು ಅದನ್ನು ಮೇಲಿನಿಂದ ನೋಡುತ್ತೇನೆ ಎಂದು ಹೇಳಿಕೊಂಡಿದ್ದಾನೆ.