Thursday, February 6, 2025

LED ಬಲ್ಬ್​ ಹಾಕಿಸಲು 2 ಕೋಟಿ, ವಿಡಿಯೋ ಚಿತ್ರಿಕರಣಕ್ಕೆ 96 ಲಕ್ಷ : ಏನಿದು KSOUನ ಬ್ರಹ್ಮಾಂಡ ಭ್ರಷ್ಟಚಾರ

ಮೈಸೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವೊಂದು ಬೆಳಕಿಗೆ ಬಂದಿದ್ದು. ಇಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಚಾರವನ್ನು ಕಾನೂನು ವಿಭಾಗದ ವಿದ್ಯಾರ್ಥಿಯೋರ್ವ ಎಳೆಎಳೆಯಾಗಿ ದಾಖಲೆ ಸಮೇತ ಬಿಚ್ಚಿಟ್ಟಿದ್ದಾನೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ರೂಪಾಯಿ ಲೂಟಿಯಾಗಿರೋದು ಇದೀಗ ಬೆಳಕಿಗೆ ಬಂದಿದೆ. ವಿವಿಯ ಕುಲಪತಿ ಪ್ರೊ, ಶರಣಪ್ಪ ವಿ ಹುಲಸೆ ಸೇರಿದಂತೆ ವಿಶ್ವವಿದ್ಯಾನಿಲಯದ ಸಿಬ್ಬಂದಿ ಮೇಲೆ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ.ಈ ಬಗ್ಗೆ ದಾಖಲೆ ಸಮೇತ ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿ ಗೌಡ ಗಂಭೀರ ಆರೋಪ ಮಾಡಿದ್ದು ಬಟ್ಟೆ ಬ್ಯಾಗ್, ಕಂಪ್ಯೂಟರ್ ಖರೀದಿ, ವರ್ಚುವಲ್ ಪೋಟೋ ಶೂಟ್, ಕಿಟಕಿ ಬಾಗಿಲು ಬದಲಾವಣೆ, ಕಂಪ್ಯೂಟರ್ ಖರೀದಿ ಸೇರಿದಂತೆ ಹಲವು ವಸ್ತುಗಳ ಖರೀದಿಯಲ್ಲೂ ಹಣ ದುರ್ಬಳಕೆ ಆಗಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ :ಚಾಂಪಿಯನ್ಸ್​​ ಟ್ರೋಫಿ ಹೊತ್ತಲ್ಲೇ ಆಸೀಸ್​ಗೆ ಆಘಾತ: ಏಕದಿನ ಕ್ರಿಕೆಟ್​ಗೆ ಸ್ಟೋಯ್ನಿಸ್​ ಗುಡ್​ಬೈ

ಕೆಎಸ್​ಓಯು ಕಟ್ಟಡದ ವರ್ಚುವಲ್ ಟೂರ್​ಗೆ 360° ಫೋಟೊಗ್ರಾಫಿ ಮಾಡಲು 96 ಲಕ್ಷದ 91 ಸಾವಿರದ 812 ರೂಪಾಯಿ. ಮೈಸೂರು ಕಟ್ಟಡ ಒಂದಕ್ಕೆ 26,15,000 ಸಾವಿರ ಬಿಲ್, ಇನ್ನುಳಿದ 11 ಕಟ್ಟಡಗಳ ಫೋಟೊಗ್ರಾಫಿಗೆ ತಲಾ 4 ಲಕ್ಷ 5 ಲಕ್ಷ ಬಿಲ್ ತೋರಿಸಲಾಗಿದ್ಯಂತೆ.

ಕೆಎಸ್ಓಯು ಕಟ್ಟಡಕ್ಕೆ ಎಲ್ಇಡಿ ಬಲ್ಬ್ ಹಾಕಿಸಲು ಬರೋಬ್ಬರಿ 2 ಕೋಟಿ ಬಿಲ್ ಮಾಡಿದ್ದು, ಕೆಎಸ್ಓಯು ಅತಿಥಿ ಗೃಹದ ಹಾಸಿಗೆ ದಿಂಬಿಗೆ 15 ಲಕ್ಷ ಬಿಲ್. ಪುಸ್ತಕ ತುಂಬಿಕೊಂಡು ಹೋಗುವ ಬ್ಯಾಗ್​ಗೆ 60 ಲಕ್ಷ ಬಿಲ್. ಒಂದು ಬ್ಯಾಗ್ 120 ರೂಪಾಯಿಯಂತೆ ಖರೀದಿ. ಈ ಬ್ಯಾಗ್ ಗಳಿಗೆ ಮಾರುಕಟ್ಟೆಯಲ್ಲಿ 20 ರಿಂದ 30 ರೂಪಾಯಿ ಮೌಲ್ಯ ಇದೆ. 120 ರೂ ಕೊಟ್ಟು 50 ಸಾವಿರ ಬ್ಯಾಗ್ ಖರೀದಿ ಮಾಡಲಾಗಿದ್ದು,ಕೆಎಸ್ಒಯು ಕ್ಯಾಂಪಸ್ ನ ಮಾನಸ ಕಟ್ಟಡದ ಕಿಟಕಿ ಬಾಗಿಲು ಬದಲಾಯಿಸಲು 7 ಕೋಟಿ ಆಗಿದ್ಯಂತೆ. 40 ಸಾವಿರ ಬೆಲೆಯ ಕಂಪ್ಯೂಟರ್ ಗೆ 97 ಸಾವಿರ ಕೊಟ್ಟು 150 ಕಂಪ್ಯೂಟರ್ ಖರೀದಿ ಮಾಡಲಾಗಿದ್ಯಂತೆ.

ಹೀಗೆ ಸಾಲು ಆರೋಪ ಮಾಡಿರುವ ಕಾನೂನು ವಿದ್ಯಾರ್ಥಿ ಪುಟ್ಟಸ್ವಾಮಿಗೌಡ, ಕೆಎಸ್ಓಯುವ ಭ್ರಷ್ಟಾಚಾರದ ಲೀಲೆಯನ್ನ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.

RELATED ARTICLES

Related Articles

TRENDING ARTICLES