ಹಾಸನ: ಟ್ರಾಕ್ಟರ್ ಮಗುಚಿ ಬಿದ್ದು ಚಾಲಕ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಮೃತ ವ್ಯಕ್ತಿಯನ್ನು ಮಲ್ಲಾಪುರ ಗ್ರಾಮದ ಸಂಜು ಎಂದು ಗುರುತಿಸಲಾಗಿದೆ.
ಹಾಸನದ, ಬೇಲೂರು ತಾಲ್ಲೂಕಿನ ಹಕ್ಕಿಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ಸ್ಟೋನ್ ಕ್ರಷರ್ನಿಂದ ಟ್ರ್ಯಾಕ್ಟರನಲ್ಲಿ ಜಲ್ಲಿ ತುಂಬಿಕೊಂಡು ಬರುವ ವೇಳೆ ಟ್ರ್ಯಾಕ್ಟರ್ ಪಲ್ಟಿಯಾಗಿದ್ದು. ಟ್ರ್ಯಾಕ್ಟರ್ ಕೆಳಗೆ ಸಿಲುಕಿದ ಚಾಲಕ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಸ್ಟೋನ್ ಕ್ರಷರ್ ಮಾಲೀಕರು ರಸ್ತೆ ಸರಿಪಡಿಸದೆ ಇರುವುದೆ ದುರ್ಘಟನೆ ಕಾರಣ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ :ಮಹಾಕುಂಭದಲ್ಲಿ ಮೋದಿ: ತ್ರಿವೇಣಿ ಸಂಗಮದಲ್ಲಿ ಅಮೃತ ಸ್ನಾನ
ಸ್ಟೋನ್ ಕ್ರಷರ್ಗೆ ಸಂಪರ್ಕ ಕಲ್ಪಿಸುವ ರಸ್ತೆ ಅತ್ಯಂತ ದುರ್ಘಮವಾಗಿದ್ದು. ಈ ರಸ್ತೆಯಲ್ಲಿ ಜಲ್ಲಿ ತುಂಬಿಕೊಂಡು ಹೋಗುವ ವಾಹನಗಳು ಕಷ್ಟಪಟ್ಟು ಸಂಚರಿಸುತ್ತವೆ. ಇಷ್ಟಾದರ ಕ್ರಷರ್ ಮಾಲೀಕರು ರಸ್ತೆಯನ್ನು ಸರಿಪಡಿಸದೆ ಇರುವುದೆ ಈ ಘಟನೆಗೆ ಕಾರಣ ಎಂದು ಆರೋಪಿಸಿ ಸ್ಥಳೀಯರು ಪ್ರತಿಭಟನೆ ನಡೆಸಿದ್ದು. ಮೃತ ಚಾಲಕನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.