ವಿಜಯಪುರ : ಶಾಲಾ ಶುಲ್ಕ ಭರಿಸದ ಕಾರಣಕ್ಕೆ ವಿದ್ಯಾರ್ಥಿಗಳನ್ನು ಪರೀಕ್ಷೆ ನೀಡದೆ ಹೊರಗೆ ಕಳುಹಿಸಿರುವ ಘಟನೆ ವಿಜಯಪುರದಲ್ಲಿ ನಡೆದಿದ್ದು. ವಿಜಯಪುರ ನಗರದ ಕೀರ್ತಿ ನಗರದಲ್ಲಿರುವ ಶಮ್ಸ್ ಶಾಲೆಯಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ವಿಜಯಪುರದ ಕೀರ್ತಿ ನಗರದ ಶಮ್ಸ್ ಶಾಲೆಯಲ್ಲಿ ಘಟನೆ ನಡೆದಿದ್ದು. ಶಾಲಾ ಶುಲ್ಕ ಭರಿಸದ ವಿದ್ಯಾರ್ಥಿಗಳಿಗೆ ಎಡರನೇ ಸೆಮಿಸ್ಟರ್ ಯುನಿಟ್ ಟೆಸ್ಟ್ ನೀಡದೆ ಮಕ್ಕಳನ್ನು ಹೊರಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಘಟನೆ ಬಗ್ಗೆ ತಿಳಿದ ಪೋಷಕರು ಶಾಲೆ ಬಳಿ ಬಂದು ವಿಚಾರಿಸಿದ್ದು. ಶಾಲಾ ಆಡಳಿತ ಮಂಡಳಿಯ ಮೇಲೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ :ಅಕ್ರಮ ಸಂಬಂಧದ ಶಂಕೆ: ನಡುರಸ್ತೆಯಲ್ಲೆ ಪತ್ನಿಗೆ ಚಾಕು ಹಾಕಿದ ಪಾಪಿ ಪತಿ
ಘಟನೆ ಕುರಿತು ಶಾಲಾ ಮುಖ್ಯೋಪಾಧ್ಯಾಯರಾದ ರೇವತಿ ಕುಲಕರ್ಣಿ ಮಾಹಿತಿ ನೀಡಿದ್ದು. ಶುಲ್ಕ ಸಮಸ್ಯೆ ಬಗೆ ಹರಿದ ಬಳಿಕ ವಿದ್ಯಾರ್ಥಿಗಳಿಗೆ ಪುನಃ ಯುನಿಟ್ ಟೆಸ್ಟ್ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಶಾಲಾ ಆಡಳಿತ ಮಂಡಳಿ ವಿರುದ್ದ ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.