ರಾಮನಗರ : ಕಾಲೇಜು ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಘಟನೆ ರಾಮನಗರದಲ್ಲಿ ನಡೆದಿದ್ದು. ಮೃತ ವಿದ್ಯಾರ್ಥಿಯನ್ನು 19 ವರ್ಷದ ಅನಾಮಿಕ ಎಂದು ಗುರುತಿಸಲಾಗಿದೆ.
ಅನಾಮಿಕ ಹಾರೋಹಳ್ಳಿ ತಾಲ್ಲೂಕಿನಲ್ಲಿರುವ ದಯಾನಂದ ಸಾಗರ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಳು. ಇದೇ ಕಾಲೇಜಿನ ಹಾಸ್ಟೆಲ್ನಲ್ಲಿ ಅನಾಮಿಕ ವಾಸ್ತವ್ಯ ಹೂಡಿದ್ದಳು. ಆದರೆ ನಿನ್ನೆ ರಾತ್ರಿ 8 ಗಂಟೆ ವೇಳೆಗೆ ರೂಂನಲ್ಲಿ ಅನಾಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಕುಂಭಮೇಳಕ್ಕೆ ತೆರಳಿದ್ದ ಕೊಪ್ಪಳದ ಯುವಕ ವಿದ್ಯುತ್ ಪ್ರವಹಿಸಿ ಸಾ*ವು
ರಾತ್ರಿ 8 ಗಂಟೆಯಾದರು ಅನಾಮಿಕ ಊಟಕ್ಕೆ ಬರದ ಹಿನ್ನಲೆ ಅನುಮಾನಗೊಂಡ ಇತರ ವಿದ್ಯಾರ್ಥಿನಿಯರು ರೂಂ ಬಾಗಿಲು ಬಡಿದಿದ್ದಾರೆ. ಆದರೆ ಅನಾಮಿಕ ಯಾವುದೇ ಪ್ರತಿಕ್ರಿಯೆ ನೀಡದ ಹಿನ್ನಲೆ ಮತ್ತೊಂದು ಕೀ ಬಳಸಿ ಬಾಗಿಲು ಓಪನ್ ಮಾಡದಾಗ ನೇಣು ಬಿಗಿದುಕೊಂಡಿರುವುದು ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ. ಹಾರೋಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.