ದೆಹಲಿ: ಅಮೇರಿಕಾದಲ್ಲಿ ಅಕ್ರಮವಾಗಿ ನೆಲೆಸಿದ್ದ 104 ಅಕ್ರಮ ಭಾರತೀಯ ವಲಸಿಗರನ್ನು ಅಮೇರಿಕಾ ದೇಶದಿಂದ ಹೊರ ಹಾಕಿದ್ದು. ಇದೀಗ ಅಕ್ರಮ ವಲಸಿಗರನ್ನು ಹೊತ್ತ ಅಮೇರಿಕಾದ ವಾಯುಪಡೆ ವಿಮಾನ ಅಮೃತಸರಕ್ಕೆ ಬಂದಿಳಿದಿದೆ.
ಹೌದು.. ಅಮೇರಿಕಾದಲ್ಲಿ ಡೊನಾಲ್ಡ್ ಟ್ರಂಪ್ ಅಧಿಕಾರ ವಹಿಸಿಕೊಂಡ ನಂತರ ಅಕ್ರಮವಾಗಿ ನೆಲೆಸಿರುವ ವಲಸಿಗರನ್ನು ದೇಶದಿಂದ ಹೊರ ಹಾಕಲು ಕ್ರಮ ಕೈಗೊಂಡಿದ್ದು. ಅಮೇರಿಕಾದ ಸೇನೆಯನ್ನು ಬಳಸಿಕೊಂಡು ಅಕ್ರಮ ವಲಸಿಗರನ್ನು ಹೊರ ಹಾಕಲಾಗುತ್ತಿದೆ. ಮೆಕ್ಸಿಕೋ, ಕೆನಾಡ, ಭಾರತ ಎಲ್ಲಾ ದೇಶದ ಅಕ್ರಮ ವಲಸಿಗರನ್ನು ದೇಶದಿಂದ ಹೊರಗೆ ಹಾಕಲಾಗುತ್ತಿದೆ.
ಇದನ್ನೂ ಓದಿ :ಗಂಡನ ಮೇಲಿನ ದ್ವೇಷಕ್ಕೆ ಮಗುವಿಗೆ ಬರೆ ಎಳೆದ ತಾಯಿ !
ಈ ಯೋಜೆನೆಯ ಭಾಗವಾಗಿ 104 ಅಕ್ರಮ ಭಾರತೀಯ ವಲಸಿಗರನ್ನು ಹೊತ್ತ ಅಮೆರಿಕ ಮಿಲಿಟರಿ ವಿಮಾನ ಬುಧವಾರ ಮಧ್ಯಾಹ್ನ ಅಮೃತಸರದ ಶ್ರೀ ಗುರು ರಾಮ್ದಾಸ್ ಜೀ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ಪಂಜಾಬ್ನ 30, ಹರಿಯಾಣ ಮತ್ತು ಗುಜರಾತ್‌ನ 33 ಹಾಗೂ ಮಹರಾಷ್ಟ್ರ ಮತ್ತು ಉತ್ತರ ಪ್ರದೇಶದ ತಲಾ ಇಬ್ಬರ ಈ ವಿಮಾನದಲ್ಲಿ ಭಾರತಕ್ಕೆ ಬಂದಿದ್ದಾರೆ ಎಂದು ತಿಳಿದು ಬಂದಿದೆ.