ಚಾಮರಾಜನಗರ: ಪುರಾತನ ದೇಗುಲ, ಒಂದು ಕಾಲದಲ್ಲಿ ಭಕ್ತರ ಸಕಲ ಇಷ್ಟಾರ್ಥವನ್ನು ನೆರವೇರಿಸಿದ್ದ ಈ ಶಿವಲಿಂಗದ ಮುಂದೆ ಈಗ ಮದ್ಯದ ಘಾಟು, ಬೀಡಿ-ಸಿಗರೇಟ್ ಘಮಲಿನಿಂದ ಗಬ್ಬೆದು ಹೋಗಿದೆ.
ಚಾಮರಾಜನಗರದ 17ನೇ ವಾರ್ಡ್ ಉಪ್ಪಾರ ಬಡಾವಣೆಯಲ್ಲಿರುವ ಈ ದೇಗುಲವನ್ನು ಮೈಸೂರಿನ ಮಹರಾಜರು ಕಟ್ಟಿಸಿದ್ದರು, ಆದರೀಗ,ಹಾಳುಕೊಂಪೆಯಾಗಿದೆ.
ಪಾಳುಬಿದ್ದ ದೇವಸ್ಥಾನದಲ್ಲಿ ಕುಡುಕರು, ನಶೆಗೆ ದಾಸರಾಗಿರುವವರು ಲಿಂಗದ ಮುಂದೆ ಕುಳಿತು ಮದ್ಯ ಸೇವನೆ, ಸಿಗರೇಟ್ , ಬೀಡಿ ಹೊಗೆ ಬಿಡುತ್ತಿರುವುದು ಹಿಂದೂ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ದೇವಾಲಯ ಪ್ರಾಂಗಣದ ತುಂಬೆಲ್ಲಾ ಮದ್ಯದ ಪೌಚುಗಳು , ಖಾಲಿ ಲೋಟಗಳ ರಾಶಿ ಬಿದ್ದಿದ್ದು ದೇಗುಲವನ್ನೇ ಬಾರ್ ಅಂಡ್ ರೆಸ್ಟೋರೆಂಟ್ ಆಗಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಮ್ಯಾಕ್ಸ್ ಸಿನಿಮಾ ಸಕ್ಸಸ್ ಬೆನ್ನಲ್ಲೆ: ಮ್ಯಾಕ್ಸ್ ಹಿಂದಿನ ಕಥೆ ಹೇಳಲು ಮುಂದಾದರ ಕಿಚ್ಚ
ಈ ಪಾಳು ದೇವಾಲಯ ಕುಡುಕರ ಅಡ್ಡೆಯಾಗಿದ್ದು ಸಂಬಂಧಪಟ್ಟವರು ಇದಕ್ಕೆ ಕಡಿವಾಣ ಹಾಕಬೇಕು, ಪುರಾತನ ದೇಗುಲವನ್ನು ರಕ್ಷಿಸಿಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಅಷ್ಟೇ ಅಲ್ಲದೇ ಇದೇ ರೀತಿ ಸಾಕಷ್ಟು ದೇವಾಲಯಗಳ ಅವರಣದಲ್ಲಿ ಕೆಟ್ಟ ಚಟುವಟಿಕೆಗಳು ನಡೆಯುತ್ತಿವೆ ಇದಕ್ಕೆಲ್ಲ ಕೂಡಲೇ ಕಡಿವಾಣ ಬೀಳಬೇಕು ಎಂಬುದು ಎಲ್ಲರ ಒತ್ತಾಯವಾಗಿದೆ.