ಬೆಂಗಳೂರು : ರಾಜ್ಯ ರಾಜಧಾನಿಯಲ್ಲಿ ಕನ್ನಡಿಗರ ಮೇಲೆ ಹಿಂದಿ ಭಾಷಿಕರ ದಬ್ಬಾಳಿಕೆ ಹೆಚ್ಚಾಗುತ್ತಿದ್ದು. ಕನ್ನಡಿಗ ಡೆಲಿವರು ಬಾಯ್ಗೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಚಿಕ್ಕಬಾಣಾವರದ ಗಬ್ರು ಹೋಟೆಲ್ನಲ್ಲಿ ಘಟನೆ ನಡೆದಿದ್ದು. ನಾರ್ಥ್ ಇಂಡಿಯನ್ಸ್ಗಳು ಈ ಹೋಟೆಲ್ ನಡೆಸುತ್ತಿದ್ದರು. ನಿನ್ನೆ ಡೆಲವರಿ ಬಾಯ್ ಆರ್ಡರ್ ಪಿಕ್ ಮಾಡಲು ಈ ಹೋಟೆಲ್ಗೆ ಹೋಗಿದ್ದಾನೆ. ಈ ವೇಳೆ ಒಂದು ಗಂಟೆಗಳ ಕಾಲ ಕಾಯ್ದರು ಕೂಡ ಹೋಟೆಲ್ ಸಿಬ್ಬಂದಿಗಳು ಆರ್ಡರ್ ನೀಡಿಲ್ಲ. ಈ ವೇಳೆ ಡೆಲವರಿ ಬಾಯ್ ಯಾಕೆ ಎಂದು ಕೇಳಿದ್ದಾನೆ.
ಇದನ್ನೂ ಓದಿ:ರಾಕಿಂಗ್ ಸ್ಟಾರ್ ಯಶ್ಗೆ ಮದುವೆ ಆಮಂತ್ರಣ ನೀಡಿದ ಡಾಲಿ
ಈ ವೇಳೆ ಹಿಂದಿಯಲ್ಲಿ ಮಾತನಾಡುತ್ತಿದ್ದ ಹೋಟೆಲ್ ಸಿಬ್ಬಂದಿಗಳಿಗೆ ಡೆಲವರಿ ಬಾಯ್ ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಾನೆ. ಈ ವೇಳೆ ಉದ್ರಿಕ್ತರಾದ ಹೋಟೆಲ್ ಸಿಬ್ಬಂದಿಗಳು ಡೆಲವರಿ ಬಾಯ್ ಮೇಲೆ ಹಲ್ಲೆ ನಡೆಸಿದ್ದು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇಷ್ಟಕ್ಕೆ ಸಾಲದೆ ಚಾಕುವಿನಿಂದ ಇರಿಯಲು ಯತ್ನಿಸಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆ ಕುರಿತು ಸಾಮಾಜಿಕ ಜಾಲತಾಣ ಎಕ್ಷ್ನಲ್ಲಿ ಪೋಸ್ಟ್ ಮಾಡಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು. ಹಿಂದಿ ಭಾಷಿಕರ ದಬ್ಬಾಳಿಕೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದ್ದಾರೆ.