Wednesday, August 27, 2025
Google search engine
HomeUncategorizedಬಿಜೆಪಿಗೆ ಆನೆಬಲ ತುಂಬಿದ RSS: ಮತದಾನಕ್ಕೂ ಮುನ್ನ ಕೇಜ್ರಿವಾಲ್​ಗೆ ಬಿಗ್​ಶಾಕ್​

ಬಿಜೆಪಿಗೆ ಆನೆಬಲ ತುಂಬಿದ RSS: ಮತದಾನಕ್ಕೂ ಮುನ್ನ ಕೇಜ್ರಿವಾಲ್​ಗೆ ಬಿಗ್​ಶಾಕ್​

ದೆಹಲಿ : ಇನ್ನೇನು ಕೆಲವೆ ಗಂಟೆಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಗೆ ಚುನಾವಣೆ ನಡೆಯಲಿದೆ. ಶಥಾಯ ಗಥಾಯ ಬಿಜೆಪಿ ಈ ಬಾರಿ ದೆಹಲಿ ಗದ್ದುಗೆ ಇಡಿಯಲು ಯತ್ನಿಸುತ್ತಿದ್ದು. ಬಿಜೆಪಿಯ ಈ ಪ್ರಯತ್ನಕ್ಕೆ ಬಿಜೆಪಿ ಮಾತೃ ಸಂಸ್ಥೆ RSS ಆನೆ ಬಲ ತುಂಬಿದ್ದು. ದೆಹಲಿಯಲ್ಲಿ ಚುನಾವಣೆಗೂ ಮುನ್ 50 ಸಾವಿರಕ್ಕೂ ಹೆಚ್ಚು ಸಭೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಹೌದು.. ಬಿಜೆಪಿ ದೇಶದಲ್ಲಿ ಭದ್ರವಾಗಿ ನೆಲೆಯೂರಲು ಕಾರಣವಾದ ಸಂಸ್ಥೆ RSS. ಚುನಾವಣೆಗಳಲ್ಲೂ ಕೂಡ ಬಿಜೆಪಿಗೆ ಆರ್​ಎಸ್​ಎಸ್​ ಬೆಂಬಲ ನೀಡಿದೆ. ಆದರೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಆರ್​ಎಸ್​ಎಸ್​ ಸಕ್ರಿಯವಾಗಿ ಕಾರ್ಯನಿರ್ವಹಿಸದ ಫಲವಾಗಿ ಬಿಜೆಪಿ ಸ್ವಂತ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು.

ನಂತರ ಬಿಜೆಪಿ ಮತ್ತು ಆರ್​ಎಸ್​ಎಸ್​ ನಾಯಕರು ತಮ್ಮ ಒಳಜಗಳವನ್ನು ಪರಿಹರಿಸಿಕೊಂಡು ಚುನಾವಣೆಯಲ್ಲಿ ಒಗ್ಗಾಟ್ಟಾಗಿ ಕಾರ್ಯನಿರ್ವಹಿಸದ ಪರಿಣಾಮವಾಗಿ ಮಹರಾಷ್ಟ್ರ ಮತ್ತು ಹರಿಯಾಣ ಚುನಾವಣೆಯಲ್ಲಿ ಗೆದ್ದು ಬೀಗಲು ಸಾಧ್ಯವಾಯಿತು. ಇದೀಗ ದೆಹಲಿಯಲ್ಲಿ ಆರ್​ಎಸ್​ಎಸ್​ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು. ಇದು ಅರವಿಂದ್ ಕೇಜ್ರಿವಾಲ್​ಗೆ ತಲೆ ನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ :ಅನೈತಿಕ ಸಂಬಂಧದ ಅನುಮಾನ: ಪತ್ನಿಯ ಕೊ*ಲೆ ಮಾಡಿ ಪೊಲೀಸರ ಮುಂದೆ ಶರಣಾದ ಗಂಡ

ಕಳೆದ  15 ವರ್ಷಗಳಿಂದ ದೆಹಲಿ ಗದ್ದುಗೆಯನ್ನು ಎಎಪಿ ತನ್ನ ಹಿಡಿತದಲ್ಲಿಟ್ಟುಕೊಂಡಿದೆ. ಆದರೆ ಈ ಬಾರಿ ಮಧ್ಯನೀತಿ ಹಗರಣ, ಆಡಳಿತ ವಿರೋಧಿ ಅಲೆಯಲ್ಲಿ ಬಿಜೆಪಿ ಗೆಲ್ಲುವು ಕನಸು ಕಾಣುತ್ತಿದೆ. ಏನೇ ಆದರೂ ಎರಡು ಪಕ್ಷಗಳ ನಡುವೆ ನಿಕಟ ಸ್ಪರ್ಧೆ ಏರ್ಪಡಲಿದೆ ಎಂದು ತಿಳಿದು ಬಂದಿದೆ.

ಆದರೆ ಬಿಜೆಪಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಸಂಪೂರ್ಣ ಬೆಂಬಲ ಸಿಗುತ್ತಿದೆ. ಒಂದು ವರದಿಯ ಪ್ರಕಾರ, ಸಂಘವು ಈ ಚುನಾವಣೆಗೆ ಸಜ್ಜಾಗಿದೆ. ಚುನಾವಣೆಗೂ ಮುನ್ನ ಅವರು ದೆಹಲಿಯ ವಿವಿಧ ಪ್ರದೇಶಗಳಲ್ಲಿ 50 ಸಾವಿರಕ್ಕೂ ಹೆಚ್ಚು ಸಭೆಗಳನ್ನು ನಡೆಸಿದ್ದಾರೆ. ರಾಜಧಾನಿಯ ಪ್ರತಿಯೊಬ್ಬ ಮತದಾರರನ್ನು ತಲುಪಲು ಅವರು ಒಂದು ತಂತ್ರವನ್ನು ರೂಪಿಸಿದ್ದಾರೆ.

ಇದಕ್ಕಾಗಿ ಸಂಘವು ರಾಜಧಾನಿಯನ್ನು ಎಂಟು ಇಲಾಖೆಗಳಾಗಿ ವಿಂಗಡಿಸಿದೆ ಮತ್ತು ಚುನಾವಣಾ ಪ್ರಚಾರಕ್ಕಾಗಿ ತನ್ನ ನೂರಾರು ಕಾರ್ಯಕರ್ತರನ್ನು ಕಣಕ್ಕಿಳಿಸಿದೆ. ಈ ಎಂಟು ಇಲಾಖೆಗಳ ಕಾರ್ಯಕರ್ತರು ರಾಜಧಾನಿಯ ಮತದಾರರಿಗೆ ಅರಿವು ಮೂಡಿಸಲು ಈ ಸಭೆಗಳನ್ನು ನಡೆಸಿದ್ದಾರೆ. ಮತದಾರರು ತಮ್ಮ ಮತ ಚಲಾಯಿಸುವಂತೆ ಅರಿವು ಮೂಡಿಸುವುದು ನಮ್ಮ ಕೆಲಸ ಎಂದು ಸಂಘದ ಹಿರಿಯ ಕಾರ್ಯಕರ್ತರೊಬ್ಬರು ಹೇಳಿದ್ದನ್ನು ಖಾಸಗಿ ಪತ್ರಿಕೆ ಉಲ್ಲೇಖಿಸಿದೆ. ಒಟ್ಟಾರೆಯಾಗಿ ಈ ಬಾರಿಯ ದೆಹಲಿ ಚುನಾವಣೆ ರಣ ರೋಚಕವಾಗಿ ನಡೆಯಲಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments