ತುಮಕೂರು : ಪಕ್ಕದ ಮನೆಯ ವ್ಯಕ್ತಿ ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದಕ್ಕೆ ಬೇಸತ್ತ ಗೃಹಿಣಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತುಮಕೂರಿನಲ್ಲಿ ನಡೆದಿದ್ದು. ಮೃತ ದುರ್ದೈವಿಯನ್ನು30 ವರ್ಷದ ಅಪರ್ಣ ಎಂದು ಗುರುತಿಸಲಾಗಿದೆ.
ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಕ್ಯಾತಗಾನಚೆರ್ಲು ಗ್ರಾಮದಲ್ಲಿ ಘಟನೆ ನಡೆದಿದ್ದು. ಮೃತ ಅಪರ್ಣ ಪಕ್ಕದ ಮನೆಯಲ್ಲಿ ರಾಮಾಂಜಿನರೆಡ್ಡಿ ಎಂಬಾತ ವಾಸವಾಗಿದ್ದನು. ಈತ ಅಪರ್ಣಗೆ ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯಿಸುತ್ತಿದ್ದನು. ಇದೇ ವಿಚಾರಕ್ಕೆ ನಿನ್ನೆ ಮಹಿಳೆಗೆ ಪೋನ್ ಕರೆ ಮಾಡಿ ಅಕ್ರಮ ಸಂಬಂಧ ಬೆಳೆಸದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದನು.
ಇದನ್ನೂ ಓದಿ :ಪಕ್ಷಕ್ಕಾಗಿ ಎಷ್ಟೋ ಕಾರ್ಯಕರ್ತರು ಮನೆ, ಮಠ ಹಾಳು ಮಾಡಿಕೊಂಡಿದ್ದಾರೆ : ಸಿ.ಟಿ ರವಿ
ಇವೆಲ್ಲದರಿಂದ ಬೇಸತ್ತಿದ್ದ ಅಪರ್ಣ ಇಂದು ಬೆಳಗಿನ ಜಾವ ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಅಪರ್ಣ ಪತಿ ನರಸಿಂಹಲು ರಾಮಾಂಜಿನ ರೆಡ್ಡಿ ವಿರುದ್ದ ತಿರುಮಣಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.