Tuesday, February 4, 2025

ಭಿನ್ನಮತಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ: ಎಂ.ಪಿ ರೇಣುಕಾಚಾರ್ಯ

ದಾವಣಗೆರೆ : ಯತ್ನಾಳ್​ ಮತ್ತು ಟೀಂ ದೆಹಲಿಗೆ ಪ್ರಯಾಣ ಬೆಳೆಸಿರುವ ವಿಚಾರದ ಕುರಿತು ಮಾತನಾಡಿದ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ‘ಭಿನ್ನಮತಿಯರು ಎಷ್ಟೇ ದೆಹಲಿ ದಂಡಯಾತ್ರೆ ಮಾಡಿದರೂ ಅದು ಯಶಸ್ವಿಯಾಗಲ್ಲಾ. ಭಿನ್ನಮತಿಯರು ಮಾನಸಿಕ ಅಸ್ವಸ್ಥರಾಗಿದ್ದಾರೆ. ಸೂರ್ಯ ಚಂದ್ರ ಇರೋದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರೆಯೋದು ಅಷ್ಟೇ ಸತ್ಯ ಎಂದು ಹೇಳಿದರು.

ಪಕ್ಷದಲ್ಲಿ ಐದಾರು ಜನ ಭಿನ್ನಮತಿಯರು ಸಾಕಷ್ಟು ಮಾತನಾಡುತ್ತಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡು ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷ ಕಟ್ಟಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದ್ದು ಇನ್ನು ಟೇಕಾಪ್ ಆಗಿಲ್ಲಾ. ಐದಾರು ಜನ ಭಿನ್ನಮತಿಯರ ದೆಹಲಿ ದಂಡಯಾತ್ರೆ ಯಶಸ್ವಿಯಾಗಲ್ಲಾ. ಕಳೆದ ಒಂದು ವರ್ಷದಿಂದ ವಿಜಯೇಂದ್ರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ.basaa

ಇದನ್ನೂ ಓದಿ :ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸಂಚಾರ ಬಂದ್ : ಏಕೆ ಗೊತ್ತಾ !

ಭಿನ್ನಮತಿಯರದ್ದು ಕಾಂಗ್ರೆಸ್‌ ವಿರುದ್ದ ಹೋರಾಟ ಅಲ್ಲಾ, ವಿಜಯೇಂದ್ರ ಅವರನ್ನ ಕೆಳಗೆ ಇಳಿಸೋದೋ ಇವರ ಹೋರಾಟವಾಗಿದೆ. ನಿಮಗೆ ಮಾನ ಮರ್ಯಾದೆ ಇದ್ದರೇ ಕಾಂಗ್ರೆಸ್ ವಿರುದ್ದ ಹೋರಾಟ ಮಾಡಿ, ರಾಜ್ಯಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಸ್ಪರ್ಧೆ ಮಾಡಲಿ ಯಾರ ಯೋಗ್ಯತೆ ಏನು ಅಂತ ಗೊತ್ತಾಗುತ್ತೆ. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಮುಲು ಎತ್ತಿಕಟ್ಟಲು ಹೋದರು ಆದರೆ ಅವರು ಇದಕ್ಕೆ ತಲೆಕೆಡಿಸಿಕೊಳ್ಳಲಿಲ್ಲ.

ಬೊಮ್ಮಾಯಿ, ಸೋಮಣ್ಣ ಹೆಸರು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಮ್ಮನೆ ಎಳೆದು ತರುತಿದ್ದಾರೆ, ನಾವು ಎಲ್ಲರೂ ಕೂಡ ಸೇರಿಕೊಂಡು ದೆಹಲಿಗೆ ಹೋಗುಲು ಸಿದ್ಧ ನಮಗೇನು ದೆಹಲಿ ದಾರಿ ಗೊತ್ತಿಲ್ವಾ. ಇವರ ತಲೆ ಹರಟೆ ಜಾಸ್ತಿ ಆಗಿದೆ ಇವರಿಂದ ಪಕ್ಚದ ವರ್ಚಸ್ಸು ಕಡಿಮೆ ಆಗ್ತಾ ಇದೆ. ವಿಜಯೇಂದ್ರ ಪಕ್ಷದ ಸಂಘಟನೆಗೆ ಶ್ರಮಿಸುತಿದ್ದಾರೆ, ಭಿನ್ನರ ವಿರುದ್ಧ ನಾಳೆ ನಾವು ಕೂಡ ಬೆಂಗಳೂರಿನ ಕಟ್ಟಾ ಸುಭ್ರಮಣ್ಯ ನಾಯ್ಡು ಮನೆಯಲ್ಲಿ ಸಭೆ ಸೇರುತ್ತೇವೆ. ನಾಳೆ ಇವರ ವಿರುದ್ಧ ಹೇಗೆ ಹೋರಾಟ ಮಾಡಬೇಕು ಅನ್ನೋದು ತೀರ್ಮಾನ ಮಾಡ್ತೀವಿ. ನಾವೇಲ್ಲ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರ ಬೆನ್ನಿಗೆ ನೀಲ್ತೀವಿ ಎಂದು ಹೇಳಿದರು.

RELATED ARTICLES

Related Articles

TRENDING ARTICLES