ಬೆಂಗಳೂರು : ವಿಧಾನಸೌಧದಲ್ಲಿ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಾಣ ಮಾಡುವ ಐತಿಹಾಸಿಕ ತೀರ್ಮಾನವನ್ನು ಸ್ಪೀಕರ್ ಯು,ಟಿ ಖಾದರ್ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ವಿಧಾನಸೌಧ ಆವರಣದಲ್ಲಿ ಬೀದಿ ನಾಯಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಲು ಸ್ಪೀಕರ್ ತಜ್ಙರ ವರದಿಯನ್ನು ಕೋರಿದ್ದರು. ತಜ್ಙರ ತಂಡ ಈ ಕುರಿತು ವರದಿ ನೀಡಿದ್ದು. ರಾತ್ರಿ ವೇಳೆ ವಿಧಾನಸೌದ ಮತ್ತು ವಿಕಾಸ ಸೌಧದ ಕಾವಲಿನಂತೆ ಇರುವ ಶ್ವಾನಗಳಿಕೆ ಶೆಲ್ಟರ್ ನಿರ್ಮಿಸಲು ತೀರ್ಮಾನ ಮಾಡಲಾಗಿದೆ ಎಂದು ತಿಳಿದು ಬಂದಿದೆ. ವಿಧಾನ ಸೌಧ ಭದ್ರತಾ ಸಿಬ್ಬಂದಿಗಳು ಕೂಡ ಈ ಕುರಿತು ಮನವಿ ಮಾಡಿದ್ದರು. ಇದರ ನಿರ್ವಹಣೆಯನ್ನು ಪ್ರಾಣ ದಯಾ ಸಂಘಕ್ಕೆ ನೀಡಲು ಚಿಂತನೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಅಕ್ರಮ ಸಂಬಂಧ ಬೆಳೆಸುವಂತೆ ಒತ್ತಾಯ: ನೇಣು ಬಿಗಿದುಕೊಂಡು ಗೃಹಿಣಿ ಆತ್ಮಹ*ತ್ಯೆ
ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ !
ಈ ವಿಶಯದ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದು. ವಿಧಾನಸೌಧದಲ್ಲಿ ನಾಯಿಗಳನ್ನ ಸಾಕಲು ತೀರ್ಮಾನ ಮಾಡಿದ್ದೇವೆ. ಏನ್ ಮಾಡ್ತೀವಿ ,ಅದಕ್ಕೆ ಏನು ಹಾಕ್ತೀವಿ ಅದು ಬೇರೆ. ಈ ಕುರಿತು ಪರ ವಿರೋಧ ಇರ್ತಾವೆ, ಅದು ಸರಿಯಾಗಬೇಕು. ಫಸ್ಟ್ ಟೈಂ ಇತಿಹಾಸದಲ್ಲಿ ನಾಯಿಗಳನ್ನ ವಿಧಾನಸೌಧದಲ್ಲಿ ಸಾಕಲಾಗಿದೆ.
ಇವುಗಳಿಕೆ ಪ್ರತ್ಯೇಕ ಶೆಲ್ಟರ್ ನಿರ್ಮಾಣಕ್ಕೆ ತೀರ್ಮಾನ ಮಾಡಿದ್ದೇವೆ, ಇಲ್ಲ ಅಂದ್ರೆ ಕಂಟ್ರೋಲ್ ಮಾಡೋಕೆ ಆಗೋದಿಲ್ಲ, ಒಂದು ಕಡೆ ಮನೆ ಮಾಡಿ, ಅವುಗಳು ಗೇಟ್ ಹೊರಗೆ ಹೋಗಿ ಬರುವುದಕ್ಕೆ ವ್ಯವಸ್ಥೆ ಮಾಡಲು ಯತ್ನಿಸುತ್ತೇವೆ. ನಾವು ಬೆಳಿಗ್ಗೆ ಬಂದು ಊಟ ಹಾಕಿದರೆ ಅವು ನಮಗೆ ಏನು ಮಾಡಲ್ಲ. ವಿಧಾನಸೌದದಲ್ಲಿ ಇವತ್ತಿನವರೆಗೂ ಎಲ್ಲಿಯೂ ಕೂಡ ನಾಯಿಗಳು ಅಟ್ಯಾಕ್ ಮಾಡಿಲ್ಲ ಎಂದು ಹೇಳಿದರು.