ಬೆಂಗಳೂರು : ಕೇಂದ್ರ ಸರ್ಕಾರದ ಬಜೆಟ್ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಮಾಜಿ ಸಂಸದ ಡಿ,ಕೆ ಸುರೇಶ್ ‘ಕೇಂದ್ರದಿಂದ ರಾಜ್ಯಕ್ಕೆ ಅನುದಾನದಲ್ಲಿ ತಾರತಮ್ಯವಾಗುತ್ತಿದೆ. ಕೇಂದ್ರ ಹಣಕಾಸು ಸಚಿವರು ದೇಶದ ಎಂಟನೆ ಬಜೆಟ್ ಮಂಡನೆ ಮಾಡಿದ್ದಾರೆ, ಅವರು ಕರ್ನಾಟಕದಿಂದ ಪ್ರತಿನಿಧಿಸಿದ್ದಾರೆ. ಆದರೆ ಅವರಿಂದ ದಕ್ಷಿಣ ಭಾರತಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.
ಅನುದಾನ ಹಂಚಿಕೆ ವಿಚಾರದಲ್ಲಿ ತಾರತಮ್ಯವಾಗುತ್ತಿದೆ ಎಂಬ ವಿಚಾರದ ಕುರಿತು ಮಾತನಾಡಿದ ಡಿ,ಕೆ ಸುರೇಶ್ ‘ತೆರಿಗೆ ಪಾಲು ನ್ಯಾಯುತವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಬರುತ್ತಿಲ್ಲ, ಈ ಬಗ್ಗೆ ಕೂಗು ಎರಡು ವರ್ಷದಿಂದ ಇದೆ, ಕೇಂದ್ರ ಸರ್ಕಾರ 50 ಲಕ್ಷ ಕೋಟಿ ಬಜೆಟ್ ಮಂಡನೆ ಮಾಡಿದೆ, ಆದರೆ 200 ಲಕ್ಷ ಕೋಟಿ ಹಣವನ್ನು ಸಾಲ ಮಾಡಿದೆ. ಈ ಬಾರಿಯ ಬಜೆಟ್ ಬಿಹಾರ್ ಮತ್ತು ಆಂದ್ರಪ್ರದೇಶಗಾಗಿ ಮಂಡನೆ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ :ಕುಂಭಮೇಳಕ್ಕೆ ಭೇಟಿ ನೀಡಿಲು ಯುಪಿಗೆ ಬಂದ ನೀಡಿದ ಭೂತಾನ್ ದೊರೆ
ಮುಂದುವರಿದು ಮಾತನಾಡಿದ ಡಿಕೆ. ಸುರೇಶ್ ‘ ಗ್ಯಾರಂಟಿಗಳ ಬಗ್ಗೆ ಟೀಕೆ ಬಿಜೆಪಿ ಮಾಡುತ್ತೆ, ಕರ್ನಾಟಕ ದಿವಾಳಿಯಾಗಿದೆ ಅಂತ ಹೇಳಿದ್ದಾರೆ, ಮೋದಿ ಕೂಡ ಹಾಸ್ಯಾಸ್ಪದವಾಗಿ ಮಾತನಾಡಿದ್ದಾರೆ. ಆದಾಯ ತೆರಿಗೆ ಸ್ಲಾಬ್ ಬಗ್ಗೆ ಹೇಳಿದ್ದಾರೆ, ನೆಹರು ಕಾಲದ ಟ್ಯಾಕ್ಸ್ ಬಗ್ಗೆ ಮಾತನಾಡಿದ್ದಾರೆ. ಆದರೆ ಅವತ್ತಿನ ಮೌಲ್ಯ ಮತ್ತು ಈಗಿನ ಮೌಲ್ಯದ ಬಗ್ಗೆ ಲೆಕ್ಕ ಹಾಕಬೇಕು, ಇದರ ಬಗ್ಗೆ ಮೋದಿಗೆ ಸರಿಯಾದ ಸಲಹೆ ಕೊಟ್ಟಿಲ್ಲ.
ಬಿಹಾರಕ್ಕೆ ಮತ್ತು ಆಂದ್ರಪ್ರದೇಶದಕ್ಕೆ ಹೆಚ್ಚು ಹಣ ಕೊಟ್ಟಿದ್ದಾರೆ, ನಮ್ಮ ತೆರಿಗೆ ಹಣ ಕಳೆದ ಹತ್ತು ವರ್ಷಗಳಿಂದ ಬರುತ್ತಿಲ್ಲ, ಮೋದಿಗೆ ಕರ್ನಾಟಕದ ಜನ ಆಶೀರ್ವಾದ ಮಾಡಿದ್ದಾರೆ. ಹೆಚ್ಚು ಸಂಸದರ ಆಯ್ಕೆ ರಾಜ್ಯದಿಂದ ಬಿಜೆಪಿಗೆ ಆಗಿದೆ, ಇದನ್ನು ಬಿಜೆಪಿ ಮರೆಯಬಾರದು, ಎಷ್ಟು ದಿನ ಕನ್ನಡಿಗರು ಕಣ್ಣುಮುಚ್ಚಿ ಇರಬೇಕು
ನಮ್ಮ ರಾಜ್ಯ ದಿವಾಳಿ ಅಂತಿರಾ, ನೀವೆಷ್ಟು ಸಾಲ ಮಾಡಿದ್ದೀರಾ, ಮೇಕೆದಾಟು, ಮಹದಾಯಿ ಯೋಜನೆ ಘೋಷಣೆ ಮಾಡಿಲ್ಲ ಯಾಕೆ, ಜೋಶಿ ಏಮ್ಸ್ ತರ್ತೇನೆ ಅಂತ ಹೇಳಿ ನಿದ್ದೆ ಮಾಡುತ್ತಿದ್ದಾರೆ. ತೆರಿಗೆ,ನೀರಾವರಿ ಯೋಜನೆ ಸೇರಿದಂತೆ ರಾಜ್ಯಕ್ಕೆ ಏನುಕೊಟ್ಟಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.