ಭೂತಾನ್ : ನೆರೆಯ ದೇಶ ಭೂತಾನಿನ ದೊರೆ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್ಚುಕ್ ಅವರು ಪ್ರಯಾಗ್‌ರಾಜ್‌ನಲ್ಲಿ ನಡೆಯಲಿರುವ ಮಹಾಕುಂಭಕ್ಕೆ ಭೇಟಿ ನೀಡಲು ಭಾರತಕ್ಕೆ ಭೇಟಿ ನೀಡಿದ್ದು. ಲಕ್ನೋದ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೂತಾನ್ ರಾಜನನ್ನು ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು.
ಇಂದು ಕುಂಭಮೇಳದ ತ್ರಿವೇಣಿ ಸಂಗಮಕ್ಕೆ ಜಿಗ್ಮೇ ಖೇಸರ್ ವಾಂಗ್ಚುಕ್ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದ್ದು. ಇವರನ್ನು ಯುಪಿ ಮುಖ್ಯಮಂತ್ರಿ ಆಧಿತ್ಯನಾಥ್ ವಿಮಾನ ನಿಲ್ದಾಣದಲ್ಲಿ ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಈ ವೇಳೆ ಇಬ್ಬರು ಪರಸ್ಪರ ಕುಶಲೋಪಚಾರ ವಿಚಾರಿಸಿಕೊಂಡರು.
ಇದನ್ನೂ ಓದಿ :ಕನ್ನಡಿಗರ ಮೇಲೆ ಹೆಚ್ಚಾಯ್ತು ಹಿಂದಿ ಭಾಷಿಕರ ದಬ್ಬಾಳಿಕೆ !
ಕುಂಭಮೇಳದ ತ್ರಿವೇಣಿ ಸಂಗಮದಲ್ಲಿ ಭೂತಾನ್ ದೊರೆ ಪುಣ್ಯ ಸ್ನಾನ ಮಾಡಲಿದ್ದಾರೆ ಎಂದು ತಿಳಿದು ಬಂದಿದ್ದು. ಭೂತಾನಿನ ದೊರೆ ಮಹಾಕುಂಭಕ್ಕೆ ಭೇಟಿ ನೀಡುತ್ತಿರುವುದು ಈ ಭವ್ಯ ಧಾರ್ಮಿಕ ಸಭೆಯ ಜಾಗತಿಕ ಆಧ್ಯಾತ್ಮಿಕ ಮಹತ್ವವನ್ನು ಸೂಚಿಸುತ್ತದೆ.