ಕೊಚ್ಚಿ: ಕೇರಳದ ಕೊಚ್ಚಿಯ ತ್ರಿಪುಣಿತರಾದಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯಾಗಿತ್ತು. ಆದರೆ ಇದೀಗ ಈ ಪ್ರಕರಣಕ್ಕೆ ಟ್ವಸ್ಟ್ ದೊರೆತಿದ್ದು. ಶಾಲಾ ಬಾಲಕ ಆತ್ಮಹತ್ಯೆ ಮಾಡಿಕೊಳ್ಳಲು ಶಾಲೆಯಲ್ಲಿ ನಡೆಸಿದ್ದ ರ‍್ಯಾಗಿಂಗ್ ಕಾರಣ ಎಂದು ಬಾಲಕನ ತಾಯಿ ಆರೋಪಿಸಿದ್ದಾರೆ.
15 ವರ್ಷದ ವಿದ್ಯಾರ್ಥಿ ಮಿಹಿರ್ ಅಹ್ಮದ್ ಕೆಲವು ದಿನಗಳ ಹಿಂದೆ 26ನೇ ಮಹಡಿಯ ಫ್ಲಾಟ್ನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಬಗ್ಗೆ ಇದೀಗ ಆತನ ತಾಯಿ ಗಂಭೀರ ಆರೋಪ ಮಾಡಿದ್ದಾರೆ.
ಇದನ್ನೂ ಓದಿ :ಪ್ರಿಯಕರನೊಂದಿಗೆ ಸೇರಿ ಪತಿ ಕೊ*ಲೆ: ಶವವನ್ನು ಕಾವೇರಿ ನದಿಗೆ ಎಸೆದು ಮಿಸ್ಸಿಂಗ್ ಕೇಸ್ ದಾಖಲಿಸಿದ ಪತ್ನಿ
ಬಾಲಕ ಮಿಹಿರ್ ಆತ್ಮಹತ್ಯೆ ಮಾಡಿಕೊಳ್ಳಲು ಶಾಲೆಯಲ್ಲಿ ನಡೆದ ರ‍್ಯಾಗಿಂಗ್ ಎಂದು ಆರೋಪಿಸಿರುವ ಬಾಲಕನ ತಾಯಿ ‘ ಮಿಹಿರ್ನಲ್ಲಿ ಶಾಲೆಯಲ್ಲಿ ಥಳಿಸಿದ್ದರು, ಅವಾಚ್ಯ ಶಬ್ದಗಳಿಂದ ನಿಂದಿಸಲಗುತ್ತಿತ್ತು. ಆದರೆ ಆತ ಸಾಯುವ ಕೊನೆಯ ದಿನ ನಡೆದ ಘಟನೆ ಆತನಿಗೆ ಊಹಿಸಲಾಗದ ಅವಮಾನವನ್ನು ನೀಡಿತ್ತು. ಆತನನ್ನು ಬಲವಂತವಾಗಿ ವಾಶ್ರೂಂಗೆ ಕರೆದೊಯ್ದು ಟಾಲ್ಲೆಟ್ ಸೀಟನ್ನು ನೆಕ್ಕುವಂತೆ ಮಾಡಿದ್ದರು. ಆತನ ತಲೆಯನ್ನು ಕಮೋಡ್ ಒಳಗೆ ತಳ್ಳಿ ಫ್ಲೆಶ್ ಮಾಡಿದ್ದರು. ಈ ಕ್ರೌರ್ಯವನ್ನು ತಾಳಲಾರದೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೃತ ಬಾಲಕನ ತಾಯಿ ಆರೋಪಿಸಿದ್ದಾರೆ.
ಇದನ್ನೂ ಓದಿ :ಕುಂಭಮೇಳ ಕಾಲ್ತುಳಿತದಲ್ಲಿ ಸಾ*ವನ್ನಪ್ಪಿದವರ ಶವಗಳನ್ನು ನದಿಗೆ ಎಸೆಯಲಾಗಿದೆ: ಜಯಾ ಬಚ್ಚನ್
ಮೃತ ಬಾಲಕ ಮಿಹಿರ್ ಶಾಲೆಯಲ್ಲಿ ಚರ್ಮದ ಬಣ್ಣದ ಕಾರಣಕ್ಕೆ ಅಪಹಾಸ್ಯಕ್ಕೆ ಗುರಿಯಾಗಿದ್ದನು ಎಂದು ವರದಿಯಾಗಿದ್ದು, ಆತನಿಗೆ ರ‍್ಯಾಗಿಂಗ್ ಮಾಡಿರುವ ಆರೋಪಿಗಳು ಆತನ ಸಾವನ್ನು ಅಪಹಾಸ್ಯದ ರೀತಿಯಲ್ಲಿ ತೆಗೆದುಕೊಂಡಿದ್ದು. ವಾಟ್ಸಪ್ ಚಾಟ್ ಸಂದೇಶಗಳ ಸ್ಕ್ರೀನ್ ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ ಶಾಟ್ಗಳಲ್ಲಿ ಮೃತ ಬಾಲಕನ ಸಾವನ್ನು ಆರೋಪಿಗಳು ಆಚರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೃತನ ತಾಯಿ ಘಟನೆ ಕುರಿತು ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದು. ಅವರು ಸಂಗ್ರಹಿಸಿರುವ ಸಾಕ್ಷಿಗಳನ್ನು ಮುಖ್ಯಮಂತ್ರಿಗಳ ಕಚೇರಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಕಳಿಸಿ ಕೂಡಲೇ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಕೋರಿ ಕೊಂಡಿದ್ದಾರೆ.