ವಿಜಯಪುರ : ಬಿಜೆಪಿ ಯತ್ನಾಳ್ ಬಣ ಹೈಕಮಾಂಡ್ ಭೇಟಿಯಾಗಲು ನಾಳೆ ದೆಹಲಿಗೆ ಹೋಗುತ್ತಿದ್ದು.ಈ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಯತ್ನಾಳ್ ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಅಂತ್ಯವಾಗಬೇಕು ಎಂದು ವಾಗ್ದಾಳಿ ನಡೆಸಿದರು.
ಪಕ್ಷದಲ್ಲಿ ಎಲ್ಲವೂ ಸರಿಯಾಗುತ್ತೆ, ಮತ್ತೆ ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂದು ವಿಜಯೇಂದ್ರ ಹೇಳಿಕೆ ವಿಚಾರಕ್ಕೆ ಹೇಳಿಕೆ ನೀಡಿದ ಯತ್ನಾಳ್ ‘ ಡೆಪಾಜಿಟ್ ಕಳೆದುಕೊಳ್ಳುವವನು ತಾನೇ ಗೆಲ್ತೀನಿ ಎಂದು ಹೇಳುತ್ತಾನೆ. ನಾವು ನಿಯೋಗ ಸಮೇತ ದೆಹಲಿಗೆ ಹೊರಟಿದ್ದೇವೆ. ತಟಸ್ಥವಾಗಿದ್ದವರು ನಿಷ್ಠವಂತರಾಗಿ, ಮತಾಂತರವಾಗಿದ್ದಾರೆ. ತಟಸ್ಥರಾಗಿದ್ದುಕೊಂಡು ಎರಡು ಕಡೆ ಆಟ ಆಡ್ತಾ ಇದ್ದಾರೆ.
ಇದನ್ನೂ ಓದಿ :ಬೈಕ್ ಬೆಲೆಗಿಂತ ದಂಡದ ಮೊತ್ತವೆ ಹೆಚ್ಚು: ಸವಾರನಿಗೆ 1.61ಲಕ್ಷ ದಂಡ ವಿಧಿಸಿರುವ ಪೊಲೀಸರು
ವಿಜಯೇಂದ್ರನನ್ನು ಮುಂದುವರಿಸಿದರೆ ಬಿಜೆಪಿಗೆ ಉಳಿಗಾಲವಿಲ್ಲ. ಇವರೆಲ್ಲರ ಮಧ್ಯ ಅಡ್ಜೆಸ್ಟಮೆಂಟ್ ಇದೆ. ಡಿಕೆಶಿ ವಿಜಯೇಂದ್ರನಿಗೆ ಹೀನಾಯವಾಗಿ ಬೈದರು ಪ್ರತಿಕ್ರಿಯೆ ಕೊಡಲಿಲ್ಲ. ಶಾಸಕ ಸ್ಥಾನ ನಾನು ಕೊಟ್ಟ ಭಿಕ್ಷೆ ಎಂದು ಹೇಳಿದರು ಮಾತನಾಡಲಿಲ್ಲ. ಯಡಿಯೂರಪ್ಪ ಹಾಗೂ ಮಗನಿಗೆ ಭಯ ಪಡೆಸಿ ಬಿಟ್ಟಿದ್ದಾರೆ.
ಹಗರಣ ಹೊರಗೆ ತೆಗೆದರೆ ಪೋಕ್ಸೋ ಇದೆ, ನಕಲಿ ಸೈನ್ ಇದೆ ಎಂದು ಹೆದರಿಸಿದ್ದಾರೆ ಎಂದು ಯತ್ನಾಳ ಹೇಳಿದರು.