ಹರಿಯಾಣ : ಕ್ರಿಕೆಟ್ ಲೋಕದ ರನ್ ಮಷಿನ್ ಎಂದೆ ಹೆಸರಾಗಿರುವ ಕಿಂಗ್ ಕೊಹ್ಲಿ ಮತ್ತೊಮ್ಮೆ ತಮ್ಮ ಸರಳತೆಯ ಕಾರಣದಿಂದ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು. ನೋಡಲು ಬಂದಿದ್ದ ಅಭಿಮಾನಿಗಳನ್ನು ಮನೆ ಒಳಗೆ ಕರೆದು ಆಟೋಗ್ರಾಫ್ ನೀಡಿದ್ದಾರೆ.
ಕಳೆದ ಕೆಲ ತಿಂಗಳಿಂದ ಕಿಂಗ್ ಕೊಹ್ಲಿ ಫಾರ್ಮ್ ಕೊರತೆಯಿಂದ ಬಳಲುತ್ತಿದ್ಧಾರೆ. ಇಂಗ್ಲೇಡಿನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟೆಸ್ಟ್ನಲ್ಲಿ ಒಂದು ಸೆಂಚುರಿ ಸಿಡಿಸಿದ್ದು ಬಿಟ್ಟರೆ, ಕೊಹ್ಲಿ ಬ್ಯಾಟ್ನಿಂದ ಹೆಚ್ಚು ರನ್ ಹರಿದು ಬರುತ್ತಿಲ್ಲ. ಫಾರ್ಮ್ಗಾಗಿ ರಣಜಿ ಕ್ರಿಕೆಟ್ ಆಡಿದ್ದ ಕೊಹ್ಲಿ ಅಲ್ಲಿಯೂ ಒಂದಂಕಿಗೆ ಔಟ್ ಆಗಿದ್ದಾರೆ. ಆದರೆ ಇದೇ ಫೆಬ್ರವರಿ 06 ರಿಂದ ಇಂಗ್ಲೇಡ್ ನಡುವಿನ ಏಕದಿನ ಸರಣಿಗೆ ಕೊಹ್ಲಿ ಸಜ್ಜಾಗುತ್ತಿದ್ದು. ಇದಕ್ಕಾಗಿ ಗುರುಗ್ರಾಮ್ದಲ್ಲಿರುವ ತನ್ನ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದಾರೆ.
ಇದನ್ನೂ ಓದಿ : ಅಯೋಧ್ಯೆ ರಾಮಮಂದಿರದ ಪ್ರಧಾನ ಅರ್ಚಕರಿಗೆ ಪಾರ್ಶವಾಯು
ಈ ವೇಳೆ ಕೊಹ್ಲಿಯನ್ನು ಕಾಣುವ ಸಲುವಾಗಿ ನೂರಾರು ಅಭಿಮಾನಿಗಳು ಅವರ ಮನೆಯ ಬಳಿ ಜಮಾಯಿಸುತ್ತಿದ್ದಾರೆ. ಇದರಲ್ಲಿ ಕೆಲವು ಅಭಿಮಾನಿಗಳು ಅವರನ್ನು ನೋಡುವ ಭರವಸೆಯಿಂದ ತಡರಾತ್ರಿಯವರೆಗೂ ಮನೆ ಮುಂದೆ ಕಾದುಕುಳಿತಿದ್ದಾರೆ. ಅಂತಿಮವಾಗಿ ತನ್ನ ಅಭಿಮಾನಿಗಳ ಈ ಅಭಿಮಾನಕ್ಕೆ ಕರಗಿದ ಕೊಹ್ಲಿ ಅವರನ್ನು ತಮ್ಮ ಮನೆಗೆ ಆಹ್ವಾನಿಸಿದ್ದಲ್ಲದೆ, ವೈಯಕ್ತಿಕವಾಗಿ ಅವರಿಗೆ ಆಟೋಗ್ರಾಫ್‌ಗಳನ್ನು ನೀಡಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಪ್ರಪಂಚದಾದ್ಯಂತದ ಕ್ರಿಕೆಟ್ ಪ್ರಿಯರು ಕೊಹ್ಲಿಯನ್ನು ಮನಸಾರೆ ಹೊಗಳಿದ್ದಾರೆ.