ಬೆಂಗಳೂರು : ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ‘ ಜೆಡಿಎಸ್ ಶಾಸಕರು ನಮ್ಮ ಜೊತೆ ಸಂಪರ್ಕದಲ್ಲಿಲ್ಲ. ಆದರೆ ಅವರು ನ್ಯಾಷನಲ್ ಪಾರ್ಟಿಗೆ ಸೇರಬೇಕು ಎಂದು ಆಸೆಯಿದ್ದರೆ ಸೇರಿಕೊಳ್ಳಿ ಎಂದು ಹೇಳಿದರು.
ಕಳೆದ ಕೆಲದಿನಗಳಿಂದ ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರುತ್ತಾರೆ ಎಂಬ ಸುದ್ದಿಗಳು ಕೇಳಿ ಬರುತ್ತಿವೆ. ಇದಕ್ಕೆ ಅನೇಕ ಬಾರಿ ಕೇಂದ್ರ ಸಚಿವ ಕುಮಾರ್ ಸ್ವಾಮಿ ಸೇರಿದಂತೆ ಅನೇಕರು ಸ್ಪಷ್ಟನೆ ನೀಡಿ ನಮ್ಮ ಶಾಸಕರು ಎಲ್ಲಿಯೂ ಹೋಗಲ್ಲ ಎಂದು ಹೇಳಿದ್ದಾರೆ. ಇದೇ ವಿಚಾರದ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ‘ನಾನು ಯಾರ ಜೊತೆಯೂ ಮಾತನಾಡಿಲ್ಲ,ಜೆಡಿಎಸ್ ಶಾಸಕರ ಜೊತೆಯೂ ಮಾತನಾಡಿಲ್ಲ, ಆದರೆ ಸ್ಥಳೀಯ ಮಟ್ಟದಲ್ಲಿರುವ ಜೆಡಿಎಸ್ ಕಾರ್ಯಕರ್ತರಿಗೆ ನೋವಿದೆ.
ಇದನ್ನೂ ಓದಿ :Hassan: ಸಾಲಬಾಧೆ ತಾಳಲಾರದೆ ಆತ್ಮಹ*ತ್ಯೆ ಶರಣಾದ ರೈತ !
ಅವರು ಎಷ್ಟು ದಿನ ಅಂತ ಕಾಯುತ್ತಾರೆ. ಅವರಿಗೆ ನ್ಯಾಷನಲ್ ಪಾರ್ಟಿಗೆ ಸೇರಬೇಕೆಂಬ ಆಸೆ ಇದೆ, ಅದಕ್ಕೆ ಬಂದು ಸೇರಿಕೊಳ್ಳಿ ಎಂದು ಹೇಳಿದ್ದೆ. ಆದರೆ ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ. ನಾಲ್ಕೈದು ಶಾಸಕರು ಸಂಪರ್ಕದಲ್ಲಿದ್ದಾರೆ ಎಂಬುದೆಲ್ಲ ಫೇಕ್ ಸುದ್ದಿ ಎಂದು ಹೇಳಿದರು.