Friday, April 25, 2025

ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸವಿದೆ: ಬಿ.ವೈ ವಿಜಯೇಂದ್ರ

ಶಿವಮೊಗ್ಗ: ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ ‘ ಇನ್ನು ಒಂದು ವಾರದಲ್ಲಿ ಎಲ್ಲವೂ ಸರಿಯಾಗಲಿದೆ. ಮತ್ತೆ ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.

ಬಿಜೆಪಿ ರಾಜ್ಯಧ್ಯಕ್ಷ ಸ್ಥಾನಕ್ಕೆ ಪೈಪೋಟಿ ಆರಂಭವಾಗಿದ್ದು. ಎರಡು ಬಣಗಳಾಗಿ ಬಿಜೆಪಿ ಭಾಗವಾಗಿ ಹೋರಟ ಮಾಡುತ್ತಿವೆ. ಈ ವೇಳೆ ಬಿ,ವೈ ವಿಜಯೇಂದ್ರ ಮಾಧ್ಯಮದೊಂದಿಗೆ ಹೇಳಿಕೆ ನೀಡಿದ್ದು. ‘ಒಂದು ವಾರದ ಬಳಿಕ ಎಲ್ಲವೂ ಸರಿಯಾಗಲಿದೆ. ಬಿಜೆಪಿಯಲ್ಲಿ ಆಂತರಿಕ ಪ್ರಜಾಪ್ರಭುತ್ವದ ವ್ಯವಸ್ಥೆ ಇದೆ. ಈ ರೀತಿಯ ವ್ಯವಸ್ಥೆ ಯಾವ ರಾಜಕೀಯ ಪಕ್ಷದಲ್ಲಿಯೂ ಇರುವುದಿಲ್ಲ. ಬಿಜೆಪಿಯಲ್ಲಿ ಮಂಡಲ ಮಟ್ಟದಿಂದ ರಾಜ್ಯ ಮಟ್ಟದವರೆಗೂ ಚುನಾವಣೆ ನಡೆಯುತ್ತದೆ, ಅದೇ ರೀತಿಯಾಗಿ ಅಧ್ಯಕ್ಷರು ಆಯ್ಕೆಯಾಗುತ್ತಾರೆ.

ಇದನ್ನೂ ಓದಿ :ಖ್ಯಾತ ಗಾಯಕ ಸೋನು ನಿಗಮ್​ ಆಸ್ಪತ್ರೆಗೆ ದಾಖಲು: ಲೈವ್​ ಕಾನ್ಸರ್ಟ್​ ವೇಳೆ ಏನಾಯಿತು !

ಕಳೆದ ಒಂದು ವರ್ಷದಿಂದ ನಾನು ರಾಜ್ಯಧ್ಯಕ್ಷನಾಗಿ ಭ್ರಷ್ಟ, ದುಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇವೆ. ನಾನು ಅಧ್ಯಕ್ಷನಾಗಿ ಹೇಗೆ ಕೆಲಸ ಮಾಡಿದ್ದೇನೆ ಎಂದು ಕಾರ್ಯಕರ್ತರಿಗೆ ಮತ್ತು ಪಕ್ಷದ ಮುಖಂಡರಿಗೆ ಗೊತ್ತಿದೆ. ಈಗಾಗಿ ಮತ್ತೆ ನಾನು ಬಿಜೆಪಿ ಅಧ್ಯಕ್ಷನಾಗುತ್ತೇನೆ ಎಂದು ವಿಶ್ವಾಸವಿದೆ. ಕೇವಲ ರಾಜ್ಯಧ್ಯಕ್ಷ ಸ್ಥಾನಕ್ಕೆ ಮಾತ್ರವಲ್ಜಿಲ್ಲಾಧ್ಯಕ್ಷ ಚುನಾವಣೆಗೂ ಪೈಪೋಟಿ ಇತ್ತು, ಅದೇ ರೀತಿ ರಾಜ್ಯಾಧ್ಯಕ್ಷ ಸ್ಥಾನಕ್ಕೂ  ಪೈಪೋಟಿ ಇದೆ. ಎಲ್ಲವನ್ನು ವರಿಷ್ಟರು ಗಮನಿಸುತ್ತಿದ್ದಾರೆ, ಎಲ್ಲವೂ ಒಳ್ಳೆಯದಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES