Monday, February 3, 2025

ಪ್ರಿಯಕರನೊಂದಿಗೆ ಸೇರಿ ಪತಿ ಕೊ*ಲೆ: ಶವವನ್ನು ಕಾವೇರಿ ನದಿಗೆ ಎಸೆದು ಮಿಸ್ಸಿಂಗ್ ಕೇಸ್​ ದಾಖಲಿಸಿದ ಪತ್ನಿ

ಚಾಮರಾಜನಗರ :ಪ್ರಿಯಕರನೊಂದಿಗೆ ಸೇರಿ ಸ್ವಂತ ಪತಿಯನ್ನೆ ಕೊಲೆ ಮಾಡಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದ್ದು. ಕೊಲೆ ಮಾಡಿ ಪತಿಯ ಶವವನ್ನು ಕಾವೇರಿ ನದಿಗೆ ಎಸೆದು, ಪೊಲೀಸ್​ ಠಾಣೆಯಲ್ಲಿ ಮಿಸ್ಸಿಂಗ್​ ಕಂಪ್ಲೇಟ್​ ದಾಖಲಿಸಿದ್ದಾಳೆ. ಆದರೆ ಪೊಲೀಸ್​ ತನಿಖೆಯಲ್ಲಿ ಐನಾತಿ ಹೆಂಡತಿಯ ಖರ್ತನಾಖ್​ ಕೆಲಸ ಹೊರಬಂದಿದೆ.

ಚಾಮರಾಜನಗರ ಜಿಲ್ಲೆ, ಸಂತೇಮರಳ್ಳಿ ಸಮೀಪದ ಜನ್ನೂರಿನಲ್ಲಿ ಘಟನೆ ನಡೆದಿದೆ. ಮೃತ ರಮೇಶ್​ ಮತ್ತು ಗೀತಾ ಮದುವೆಯಾಗಿ ಸುಖ ಸಂಸಾರ ನಡೆಸುತ್ತಿದ್ದರು. ಆದರೆ ಗೀತಾಗೆ ಗುರುಪಾದ ಸ್ವಾಮಿ ಎಂಬಾತನ ಜೊತೆ ಅಕ್ರಮ ಸಂಬಂಧವಿತ್ತು. ಇವರಿಬ್ಬರ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಮುಗಿಸಲು ಪ್ಲಾನ್​ ರೂಪಿಸಿದ್ದರು.

ಇದನ್ನೂ ಓದಿ :ಟಾಯ್ಲೆಟ್​ ಕಮೋಡ್​ ನೆಕ್ಕಿಸಿ ರ‍್ಯಾಗಿಂಗ್: 26ನೇ ಮಹಡಿಯಿಂದ ಜಿಗಿದು ಬಾಲಕ ಸಾ*ವು

ಕಳೆದ ತಿಂಗಳು 13ರಂದು ರಮೇಶ್​ನನ್ನು ಕೊಲೆ ಮಾಡಿದ್ದ ಇವರು ರಮೇಶ್​ ಶವವನ್ನು ಕುಪ್ಪೆಗಾಲದ ಬಳಿ ಸೇತುವೆ ಕೆಳಗೆ ಬಿಸಾಡಿದ್ದರು. ಘಟನೆ ಸಂಬಂಧ ಐನಾತಿ ಹೆಂಡತಿ ಜನವರಿ 21ರಂದು ಕುದೇರು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಪೊಲೀಸ್​ ವಿಚಾರಣೆ ವೇಳೆ ಕಳ್ಳಾಟವಾಡುತ್ತಿದ್ದ ಹೆಂಡತಿ ಇದೀಗ ಪ್ರಿಯಕರ ಜೊತೆ ಸೇರಿ ಗಂಡನ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES