ಹಾಸನ : ಸಾಲಬಾಧೆ ತಾಳಲಾರದೆ ರೈತ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದ್ದು. ಆತ್ಮಹತ್ಯೆ ಮಾಡಿಕೊಂಡ ರೈತನನ್ನು 50 ವರ್ಷದ ರವಿ ಎಂದು ಗುರುತಿಸಲಾಗಿದೆ.
ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಕಂಟೇನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದ್ದು. ರೈತ ರವಿ ಸಾಲ ಮಾಡಿ ಶುಂಠಿ ಬೆಳೆದಿದ್ದನು. ಬೆಳೆ ಸರಿಯಾಗಿ ಬಂದಿರಲಿಲ್ಲ, ಜೊತೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ರವಿ ಬೇಸತ್ತಿದ್ದನು ಜೊತೆಗೆ ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿದ್ದ ರವಿ ಮೈತುಂಬ ಸಾಲ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಸಿಎಂ ಬದಲಾವಣೆ ಬಗ್ಗೆ ಅಶೋಕ್ ಬಳಿ ಜೋತಿಷ್ಯ ಕೇಳುತ್ತೇನೆ : ಡಿ.ಕೆ ಶಿವಕುಮಾರ್
ವಿವಿಧ ಮೈಕ್ರೋ ಫೈನಾನ್ಸ್ಗಳಿಂದ ಲಕ್ಷಾಂತರ ರೂ ಸಾಲ ಮಾಡಿದ್ದ ರವಿ ಎಸ್‌ಎಸ್ ಮೈಕ್ರೋಫೈನಾನ್ಸ್‌ನಿಂದ – 60,000, ಚೈತನ್ಯ ಮೈಕ್ರೋಫೈನಾನ್ಸ್‌ನಿಂದ -60,000, ಸಮಸ್ತ ಮೈಕ್ರೋಫೈನಾನ್ಸ್‌ನಿಂದ -70,000, ಎಲ್ ಅಂಡ್ ಟಿ ಮೈಕ್ರೋಫೈನಾನ್ಸ್‌ನಿಂದ – 65,000, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಿಂದ – 1,50,000 ಸೇರಿದಂತೆ ಒಟ್ಟು 14,405,000 ಸಾಲ ಮಾಡಿಕೊಂಡಿದ್ದನು.
ಇವೆಲ್ಲದರಿಂದ ಬೇಸತ್ತಿದ್ದ ರೈತ ರವಿ.ಕೆ,ಡಿ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಗಾರಕ್ಕೆ ರವಾನಿಸಿದ್ದು. ಶಾಸಕ ಎ.ಮಂಜು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾತ್ವಂನ ಹೇಳಿದ್ದಾರೆ ಎಂದು ತಿಳಿದು ಬಂದಿದೆ.