Monday, February 3, 2025

ಸತೀಶ್​ ಜಾರಕಿಹೋಳಿಯನ್ನು ಸಿಎಂ ಮಾಡಲು ಹರಕೆ ಕಟ್ಟಿಕೊಂಡ ಅಭಿಮಾನಿಗಳು

ಬೆಳಗಾವಿ : ಸಚಿವ ಸತೀಶ್​ ಜಾರಕಿಹೋಳಿ ಮುಂದಿನ ಸಿಎಂ ಎಂದು ಸತೀಶ್​ ಅಭಿಮಾನಿಗಳು ಪ್ರಯಾಗ್​ ರಾಜ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಹರಕೆ ಕಟ್ಟಿಕೊಂಡಿದ್ದು. ಸತೀಶ್​ ಜಾರಕಿಹೋಳಿ ಸಿಎಂ ಆಗಬೇಕು ಎಂದು ಅಭಿಯಾನ ಮುಂದುವರಿದಿದೆ.

ಹೌದು.. ಕಳೆದ ತಿಂಗಳು ಸಿಗಂದೂರಿನ ಚಾಮುಂಡೇಶ್ವರಿ ದೇವಾಸ್ಥಾನಕ್ಕೆ ಭೇಟಿ ನೀಡಿದ್ದ ಸತೀಶ್ ಜಾರಕಿಹೋಳಿ ಅಭಿಮಾನಿಗಳು ಮುಂದಿನ ಸಿಎಂ ಸತೀಸ್​ ಜಾರಕಿಹೋಳಿ ಎಂಬ ಪೋಸ್ಟರ್​ ಹಿಡಿದು ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ಸತೀಶ್​ ಅಭಿಮಾನಿಗಳು ತಮ್ಮ ಅಭಿಯಾನವನ್ನು ಮುಂದುವರಿಸಿದ್ದು. ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲೂ ತಮ್ಮ ಅಭಿಯಾನವನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ :ನಾನೇ ರಾಜ್ಯಧ್ಯಕ್ಷನಾಗುತ್ತೇನೆ ಎಂಬ ಸಂಪೂರ್ಣ ವಿಶ್ವಾಸವಿದೆ: ಬಿ.ವೈ ವಿಜಯೇಂದ್ರ

ಉತ್ತರಪ್ರದೇಶದಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿರುವ  ಸತೀಶ್​ ಜಾರಕಿಹೋಳಿ ಅಭಿಮಾನಿಗಳು ತ್ರಿವೇಣಿ ಸಂಗಮದಲ್ಲಿ ಸತೀಶ್​ ಜಾರಕಿಹೋಳಿ ಅವರ ಪೋಸ್ಟರ್​ ಹಿಡಿದು ಪುಣ್ಯ ಸ್ನಾನ ಮಾಡಿದ್ದು, ಮುಂದಿನ ಸಿಎಂ ಆಗಲಿ ಎಂದು ಹರಕೆ ಕಟ್ಟಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

Related Articles

TRENDING ARTICLES