ದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ಮಹಾಕುಂಭ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಸಂಸದೆ ಜಯಬಚ್ಚನ್ ಸೋಮವಾರ ಬಿಜೆಪಿ ನೇತೃತ್ವದ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು “ಶವಗಳನ್ನು ನದಿಗೆ ಎಸೆಯಲಾಗಿರುವುದರಿಂದ ನೀರು ಹೆಚ್ಚು ಕಲುಷಿತವಾಗಿದೆ” ಎಂದು ಹೇಳಿದರು.
ರಾಜ್ಯ ಸಭೆಯಲ್ಲಿ ನಡೆದ ಶೂನ್ಯ ಚರ್ಚೆ ವೇಳೆಯಲ್ಲಿ ಜನಶಕ್ತಿ ಕುರಿತು ನಡೆದ ಚರ್ಚೆಯ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಜಯಬಚ್ಚನ್ ‘ಈಗ ನೀರು ಎಲ್ಲಿ ಹೆಚ್ಚು ಕಲುಶಿತವಾಗಿದೆ ಎಂದರೆ ಅದು ಕುಂಭಮೇಳದಲ್ಲಿ, ಕುಂಭಮೇಳದಲ್ಲಿ ಕಾಲ್ತುಳಿತ ಉಂಟಾಗಿ ಸಾವನ್ನಪ್ಪಿದವರ ಶವಗಳನ್ನು ನದಿಗೆ ಎಸೆಯಲಾಗಿದೆ. ಇದರಿಂದ ನೀರು ಇನ್ನಷ್ಟು ಕಲುಷಿತವಾಗಿದೆ ಎಂದು ಹೇಳಿದರು.
ಇದನ್ನೂ ಓದಿ :ವಿದ್ಯಾರ್ಥಿಗಳೊಂದಿಗೆ ಮೋದಿ ಸಂವಾದ: ಶಿಕ್ಷಣಕ್ಕೆ ಆಪ್ ಸರ್ಕಾರದ ಕೊಡುಗೆ ವಿರುದ್ದ ವಾಗ್ದಾಳಿ
ಮುಂದುವರಿದು ಮಾತನಾಡಿದ ಅವರು ‘ ಕುಂಭಮೇಳಕ್ಕೆ ಭೇಟಿ ನೀಡುವ ಸಾಮಾನ್ಯ ಮತ್ತು ಬಡಜ ಜನರಿಗೆ ಸರ್ಕಾರ ಯಾವುದೇ ಸಮರ್ಪಕ ವ್ಯವಸ್ಥಯನ್ನು ಮಾಡಿಲ್ಲ. ಆದರೆ ವಿಐಪಿಗಳಿಗೆ ಮಾತ್ರ ವಿಶೇಷ ಸೇವೆಗಳನ್ನು ನೀಡುತ್ತಿದೆ. 34ಕ್ಕೂ ಹೆಚ್ಚು ಕೋಟಿ ಜನರು ಮಹಾಕುಂಭಕ್ಕೆ ಭೇಟಿ ನೀಡಿದ್ದಾರೆ ಎಂದು ಉತ್ತರ ಪ್ರದೇಶ ಸರ್ಕಾರ ಸುಳ್ಳು ಹೇಳುತ್ತಿದೆ. ಒಂದು ಸ್ಥಳದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ಜನರು ಹೇಗೆ ಸೇರಲು ಸಾಧ್ಯ? ಎಂದು ಜಯಾ ಬಚ್ಚನ್ ಪ್ರಶ್ನಿಸಿದ್ದಾರೆ.