ವಿಜಯಪುರ: ಪ್ರೀತಿ, ಪ್ರೇಮ ಅಂತಾ ಹೆತ್ತ ತಂದೆ, ತಾಯಿ, ಅಣ್ಣ ತಮ್ಮಂದಿರು, ಅಕ್ಕತಂಗಿಯರನ್ನ ದೂರ ಮಾಡಿ ಬಿಡುತ್ತೇವೆ. ಪ್ರೀತಿಸಿದ ಪ್ರಿಯಕರ ಒಳ್ಳೆಯವನಾದ್ರೆ ಓಕೆ. ಇಲ್ಲವಾದ್ರೆ ಪ್ರೇಯಸಿಯ ಪಾಡು ಬೀದಿ ಪಾಲಾಗತ್ತೆ. ಇದಕ್ಕೆ ತಾಜಾ ಉದಾಹರಣೆ ವಿಜಯಪುರದಲ್ಲಿ ನಡೆದಿದೆ.
ಹೌದು ಈ ಮೇಲಿರುವ ಪೋಟೊದಲ್ಲಿರುವ ಈ ವ್ಯಕ್ತಿಯ ಹೆಸರು ಆರೀಫ್ ಅಂತಾ. ಇವನು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ಪಟ್ಟಣದವನು. ಇನ್ನು ಇವಳು ಶಾಹೀನ ಅಂತಾ. ಶಾಹೀನ ಮೂತಹ ಆಂಧ್ರ ಪ್ರದೇಶದ ಚಿತ್ತಾಪುರ ಜಿಲ್ಲೆಯವಳು. ಶಾಹೀನ ಕಳೆದ ನಾಲ್ಕು ವರ್ಷದ ದಿಂದ ದುಬೈನ್ ಕತಾರನಲ್ಲಿ ಕೆಲಸ ಮಾಡುತ್ತಿದ್ದಳು. ಅಲ್ಲಿಯೇ ಆರೀಫ್ ಕೂಡ ಕೆಲಸಕ್ಕೆ ಸೇರಿಕೊಂಡಿದ್ದ. ಅಲ್ಲಿ ಇಬ್ಬರಿಗೂ ಪರಿಚಯವಾಗಿ ನಂತರ ಪ್ರೇಮಾಂಕುರವಾಗಿ ಮೂರು ವರ್ಷ ಒಟ್ಟಿಗೆ ಸಂಸಾರ ನಡೆಸಿದ್ದಾರೆ.
ಇದನ್ನೂ ಓದಿ :ಪ್ರಿಯಕರನೊಂದಿಗೆ ಸೇರಿ ಪತಿ ಕೊ*ಲೆ: ಶವವನ್ನು ಕಾವೇರಿ ನದಿಗೆ ಎಸೆದು ಮಿಸ್ಸಿಂಗ್ ಕೇಸ್ ದಾಖಲಿಸಿದ ಪತ್ನಿ
ನಂತರ ಕರ್ನಾಟಕಕ್ಕೆ ಸ್ವ ಗ್ರಾಮಕ್ಕೆ ತೆರಳಿ ಸೆಟಲ್ ಆಗೋಣ ಅಂತಾ ಹೇಳಿ ಆರೀಫ್ ತಾಳಿಕೊಟೆಗೆ ಶಾಹೀನಳನ್ನ ಕರೆ ತಂದಿದ್ದಾನೆ. ನಂತರ ಆರೀಫ್ ಕುಟುಂಬಸ್ಥರ ಸಮ್ಮುಖದಲ್ಲಿ ಕಳೆದ ತಿಂಗಳು ಜನವರಿ 9 ರಂದು ಮದುವೆಯಾಗಿದ್ದಾರೆ. ಆದರೆ ಮದುವೆಯಾದ 20 ದಿನದಲ್ಲೇ ಆರೀಫ್ ಹಾಗೂ ಆತನ ಕುಟುಂಬಸ್ಥರು ತಲಾಕ್ ಕೊಡಲು ಶಾಹೀನಗೆ ಒತ್ತಾಯಿಸಿದರಂತೆ. ಅಲ್ಲದೆ ಶಾಹೀನ್ ಗೆ ನಾನಾ ಕಿರುಕುಳವನ್ನ ಆರೀಫ್ ಕುಟುಂಬಸ್ಥರು ನೀಡಿದರಂತೆ. ಇದರಿಂದ ಬೇಸತ್ತ ಶಾಹೀನ ಪೊಲಿಸ್ ಠಾಣೆಯ ಮೆಟ್ಟಿಲು ಏರಿದ್ದಾಳೆ. ಆಗ ಆರೀಫ್ ಶಾಹೀನ ಜೊತೆ ಸರಿಯಾಗಿ ಸಂಸಾರ ಮಾಡೊದಾಗಿ ಹೇಳಿ ಕರೆದುಕೊಂಡು ಬಂದಿದ್ದಾನೆ.
ಇದನ್ನೂ ಓದಿ :ಕಣ್ಣಪ್ಪ ಸಿನಿಮಾದಲ್ಲಿ ರುದ್ರನಾದ ಪ್ರಭಾಸ್: ಫಸ್ಟ್ ಲುಕ್ ರಿವೀಲ್
ನಂತರ ಆರೀಫ್ ಕೆಲ ದಿನ ಸರಿಯಾಗಿದ್ದು ಬಳಿಕ ಶಾಹೀನ ಮೇಲೆ ಹಲ್ಲೆ ಕೂಡ ಮಾಡಿದ್ದಾನಂತೆ. ನಂತರ ಇಬ್ಬರು ವಿಜಯಪುರದ ಬುರಣಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರಂತೆ. ಅಲ್ಲಿಯೂ ಕೂಡ ಇಬ್ಬರ ಮಧ್ಯೆ ಗಲಾಟೆ ನಡೆದಿದೆ. ಆಗ ಆರೀಫ್ ತನ್ನ ಇಬ್ಬರು ಸಂಬಂಧಿಕರೊಂದಿಗೆ ಬಂದು ಚಾಕು ತೋರಿಸಿ, ಜೀವಬೆದರಿಕೆ ಹಾಕಿ ಶಾಹೀನ ಬಳಿ ಇದ್ದ ಹಣ, ಮೊಬೈಲ್ ಸೇರಿದಂತೆ ಎಲ್ಲ ದಾಖಲಾತಿಗಳನ್ನು ತಗೆದುಕೊಂಡು ಪರಾರಿಯಾಗಿದ್ದಾನೆ. ಸದ್ಯ ಶಾಹೀನ ಬೀದಿ ಪಾಲಾಗಿದ್ದು,ನನ್ನ ಗಂಡನನ್ನ ಹುಡುಕಿ ಕೊಡಿ ಅಂತಾ ವಿಜಯಪುರ ಗ್ರಾಮೀಣ ಪೊಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಸದ್ಯ ಶಾಹೀನ್ ಗೆ ಹಾಗೂ ಶಾಹೀನ ಸಂಬಂಧಿಕರಿಗೆ ಪೋನ್ ಮಾಡಿ ಆರೀಫ್ ಸಂಬಂಧಿಕರು ಜೀವ ಬೆದರಿಕೆ ಹಾಕುತ್ತಿದ್ದಾರಂತೆ. ಸದ್ಯ ನನಗೆ ಯಾರಿಂದು ನ್ಯಾಯ ಸಿಗುತ್ತಿಲ್ಲ. ನ್ಯಾಯ ಸಿಗಲಿಲ್ಲ ಅಂದ್ರೆ ಆರೀಫ್ ಕುಟುಂಬಸ್ಥರು, ನನ್ನ ಮದುವೆ ಮಾಡಿಸಿದವರ ಹೆಸರು ಬರದಿಟ್ಟು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಎಚ್ಚರಿಕೆ ನೀಡಿದ್ದಾಳೆ. ಇನ್ನೂ ಈ ವಿಚಾರವಾಗಿ ದೂರು ದಾಖಲಾಗಿದ್ದು ಈ ಪ್ರಕರಣ ಪೋಲಿಸರು ಹೇಗೆ ಬಗೆ ಹರಿಸುತ್ತಾರೋ ಕಾದು ನೊಡೋಣ.