Saturday, February 1, 2025

ಮಧ್ಯಮ ವರ್ಗಕ್ಕೆ ಮೋದಿ ಬಂಪರ್​​ ಕೊಡುಗೆ: ಆದಾಯ ತೆರಿಗೆಯ ಸ್ಲಾಬ್​ ಇಳಿಕೆ !

ದೆಹಲಿ : 2025-26ನೇ ಸಾಲಿನ ಕೇಂದ್ರ ಬಜೆಟ್​ನ್ನು ವಿತ್ತ ಸಚಿವೆ ನಿರ್ಮಾಲ ಸೀತಾರಾಮನ್​ ಮಂಡನೆ ಮಾಡುತ್ತಿದ್ದು. ಎಲ್ಲರ ನಿರೀಕ್ಷೆಯಂತೆ ಈ ಬಾರಿ ಮೋದಿ ಸರ್ಕಾರ ಮಧ್ಯಮ ವರ್ಗದ ಜನರಿಗೆ ಭಾರಿ ಕೊಡುಗೆ ನೀಡಿದೆ. 12 ಲಕ್ಷದವರೆಗೂ ಆದಾಯ ತೆರಿಗೆಯ ಮಿತಿಯನ್ನು ಏರಿಸಿದೆ.

ಹೊಸ ಟ್ಯಾಕ್ಸ್​​ ಲೆಕ್ಕಾಚಾರ !

  • 0 ಯಿಂದ 4 ಲಕ್ಷದ ತನಕ : 00%
  • 5 ರಿಂದ 8 ಲಕ್ಷದ ಆದಾಯ: 05%
  • 8ರಿಂದ 10 ಲಕ್ಷದ ಆದಾಯ: 10%
  • 12ರಿಂದ 16 ಲಕ್ಷದ ಆದಾಯ: 15%
  • 16ರಿಂದ 20ಲಕ್ಷದ ಆದಾಯ: 20%
  • 24ಕ್ಕಿಂತ ಹೆಚ್ಚು ಆದಾಯ : 25%ರಷ್ಟು ಟ್ಯಾಕ್ಸ್​ ವಿಧಿಸಲಾಗಿದೆ

 

2025-26ನೇ ಸಾಲಿನ ಕೇಂದ್ರ ಬಜೆಟ್​ನ ಮುಖ್ಯಾಂಶಗಳು !

  1. ಕೃಷಿ ಕ್ಷೇತ್ರ ಮೋದಿ ಕೊಡುಗೆ !
  • ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ 3 ಲಕ್ಷದಿಂದ 5ಲಕ್ಷಕ್ಕೆ ಏರಿಕೆ
  • ರಾಜ್ಯಗಳ ಸಹಭಾಗಿತ್ವದಲ್ಲಿ ಧನ-ಧಾನ್ಯ ಕೃಷಿ ಯೋಜನೆ
  • 100 ಜಿಲ್ಲೆಗಳಲ್ಲಿ ಧನ-ಧಾನ್ಯ ಕೃಷಿ ಯೋಜನೆ ಜಾರಿ
  • ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬೆಳೆ ಬೆಳೆಯಲು ಯೋಜನೆ
  • 10 ವರ್ಷಗಳ ಕಾಲ ಮಿಷನ್​ ಮೋಡ್​ನಲ್ಲಿ ಯೋಜನೆ
  • ಹೊಸ ಕೃಷಿ ನೀತಿಯಿಂದ 1.75 ಕೋಟಿ ರೈತರಿಗೆ ಅನುಕೂಲ
  • ಕಾಟನ್​ ಬೆಳೆಗೆ ವಿಶೇಷ ಉತ್ತೇಜನ ನೀಡಲು ವಿಶೇಷ ಪ್ಲ್ಯಾನ್​
  • ಕಾಟನ್​ ಉದ್ಯಮಕ್ಕೆ ಅನುಕೂಲ ಆಗುವಂತೆ ಬೆಳೆಗೆ ಉತ್ತೇಜನ
  • ಮೀನುಗಾರಿಗಾ ವಲಯಕ್ಕೆ 60 ಸಾವಿರ ಕೋಟಿ ಅನುದಾನ
  • ಬಿಹಾರದಲ್ಲಿ ಮಕಾನಾ ಬೋರ್ಡ್ ಹೊಸದಾಗಿ ಆರಂಭ
  • ಯುವಕರನ್ನು ಕೃಷಿಯತ್ತ ಸೆಳೆಯಲು ವಿಶೇಷ ಯೋಜನೆ
  • ಸಮಗ್ರ ಭಾಗಿದಾರಿ ಜೊತೆ ಕೃಷಿ ಉತ್ಪಾದನೆ ಹೆಚ್ಚಳಕ್ಕೆ ಆದ್ಯತೆ
  • ರೈತರು, ಮೀನುಗಾರರಿಗೆ ಸುಲಭ ಕಂತುಗಳ ಸಾಲ ಯೋಜನೆ.
  • ಕಿಸಾನ್ ಕ್ರೆಡಿಟ್ ಕಾರ್ಡ್​​​ ಸಾಲ ಮಿತಿ 3ರಿಂದ 5 ಲಕ್ಷ ರೂ.ಗೆ ಏರಿಕೆ
  1. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಬಜೆಟ್​ನಲ್ಲಿ ಹಣ ಮೀಸಲು !
  • ಸಣ್ಣ ಉದ್ದಿಮೆಗಳಿಗೆ 1.5 ಲಕ್ಷ ಕೋಟಿ ಸಾಲದ ನೆರವು.
  • SC/ST ಉದ್ದಿಮೆಗಳಿಗೆ ₹2 ಕೋಟಿ ವರೆಗೆ ಸಾಲ
  • ಸಾರ್ಟ್​​ಅಪ್​ಗಳಿಗೆ 20 ಕೋಟಿ ವರೆಗೆ ಸಾಲ
  • ಚರ್ಮ & ಚಪ್ಪಲಿ ಉದ್ಯಮಕ್ಕೆ ಹೆಚ್ಚಿನ ಆದ್ಯತೆ
  • ಸಣ್ಣ ಉದ್ದಿಮೆಗಳಿಗೆ 1.5 ಲಕ್ಷ ಕೋಟಿ ಸಾಲದ ನೆರವು
  • ಸಣ್ಣ ಉದ್ದಿಮೆಗಳಿಂದ ಶೇ.45ರಷ್ಟು ರಫ್ತು ಹೆಚ್ಚಳ ನಿರೀಕ್ಷೆ
  • ಅತಿಸಣ್ಣ ಉದ್ಯಮಿಗಳಿಗೆ 10 ಲಕ್ಷ ಪ್ರತ್ಯೇಕ ಕ್ರೆಡಿಟ್ ಕಾರ್ಡ್​
  • ಅತಿಸಣ್ಣ ಉದ್ದಿಮೆಗಳಿಗೆ 20 ಸಾವಿರ ಕೋಟಿ ರೂ. ಅನುದಾನ
  • ‘ಮೇಕ್ ಇನ್ ಇಂಡಿಯಾ ಟಾಯ್ಸ್’ಗೆ ಕೇಂದ್ರದ ಆದ್ಯತೆ
  • ಜಾಗತಿಕ ಬೊಂಬೆಗಳ ಉತ್ಪಾದನಾ ಕೇಂದ್ರವಾಗಿ ಭಾರತ
  • ಬೊಂಬೆಗಳ ನಾಡು ಚನ್ನಪಟ್ಟಣಕ್ಕೆ ಹೆಚ್ಚಿನ ಸೌಲಭ್ಯ ಸಾಧ್ಯತೆ
  • ಬಿಹಾರದಲ್ಲಿ ಆಹಾರ ಸಂಸ್ಕರಣೆ ಘಟಕ ಸ್ಥಾಪನೆ
  • 5 ಲಕ್ಷ SC/ST ಮಹಿಳಾ ಉದ್ಯಮಿಗಳಿಗೆ ಹೊಸ ಯೋಜನೆಶ
  1. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್​ನ ಕೊಡುಗೆ 
  • ಮೆಡಿಕಲ್​ ಕಾಲೇಜ್​ಗಳಲ್ಲಿ 10 ಸಾವಿರ ಹೊಸ ಸೀಟ್​ಗಳು
  • AI ಕ್ಷೇತ್ರಕ್ಕೆ 500 ಕೋಟಿ, 3 ಹೊಸ AI ಕೇಂದ್ರಗಳ ಸ್ಥಾಪನೆ
  • 23 ಐಐಟಿ ಕೇಂದ್ರಗಳಲ್ಲಿ ದಾಖಲಾತಿ ಡಬ್ಬಲ್​ ಮಾಡಲಾಗುತ್ತೆ
  • 60 ಸಾವಿರದಿಂದ 1.2 ಲಕ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಳ
  • ಐಐಟಿಗಳಲ್ಲಿ ಸಂಶೋಧನೆ ಮಾಡುವವರಿಗೆ 10 ಸಾವಿರ ನೆರವು,
  • ಅಂಗನವಾಡಿಗಳಲ್ಲಿ ಪೋಷಣ 2.0 ಯೋಜನೆ ಜಾರಿಗೆ ನಿರ್ಧಾರ, ಇದರಿಂದ ದೇಶದ 8 ಕೋಟಿ ಮಕ್ಕಳಿಗೆ  ಪೋಷಣೆಯುಕ್ತ ಆಹಾರ
  • ಎಲ್ಲಾ ಸರ್ಕಾರಿ ಶಾಲೆಗಳಿಗೂ ಬ್ರಾಂಡ್‌ಬ್ಯಾಂಡ್ ಸಂಪರ್ಕ

RELATED ARTICLES

Related Articles

TRENDING ARTICLES