ರೇಣುಕಾಸ್ವಾಮಿ ಕೊಲೆ ಪ್ರಕರಣ ಎ1 ಆರೋಪಿ ಪವಿತ್ರಾ ಗೌಡ ಟೆಂಪಲ್ ರನ್ ಕೈಗೊಂಡಿದ್ದು. ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಭೇಟಿ ನೀಡಿದ್ದ ನಟಿ, ಇದೀಗ ಕಾಶಿ ವಿಶ್ವನಾಥ ಮಂದಿರಕ್ಕೆ ಭೇಟಿ ನೀಡಿದ್ದಾರೆ. ಈ ಕುರಿತು ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದ್ದು, ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಕೊನೆಗೆ ಧರ್ಮಕ್ಕೆ ಗೆಲುವು ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಶಾಲಾ ಬಸ್ ಅಪಘಾತ: 10ಕ್ಕೂ ಹೆಚ್ಚು ಮಕ್ಕಳಿಗೆ ಗಂಭೀರ ಗಾಯ
ಧರ್ಮ ಅಧರ್ಮಗಳ ಸಂಘರ್ಷದಲ್ಲಿ ಗೆದ್ದದ್ದು ಧರ್ಮವೇ.ಮೊದಮೊದಲು ಅಧರ್ಮಕ್ಕೆ ಜಯ ಸಿಕ್ಕಿರಬಹುದು, ಆದರೆ ಕೊನೆಗೆ ಗೆಲುವಾಗುವುದು ಧರ್ಮಕ್ಕೆ. ಎಲ್ಲಾ ಗೌರವಾನ್ವಿತ ಸುದ್ದಿ ವಾಹಿನಿಗಳಿಗೂ ಹಾಗೂ ಸಾಮಾಜಿಕ ಜಾಲತಾಣಗಳಿಗೂ ನನ್ನ ವಂದನೆಗಳು, ಕೇವಲ ಕೆಲವು ಮಾಧ್ಯಮದವರ ಅಮಾನವೀಯ ಮಾತುಗಳು ಹಾಗೂ ಕೆಲ ವಿಕೃತ ಮನಸ್ಕರ comments ಬೇಸರ ತಂದಿದೆ.
ಕಾಲಾಯ ತಸ್ಮೈ ನಮಃ
ಎಂದು ಬರೆದುಕೊಂಡಿದ್ದಾರೆ.