Friday, September 12, 2025
HomeUncategorizedಆಸ್ತಿ ವಿವಾದ : ವೃದ್ದ ತಂದೆ-ತಾಯಿಗೆ ಬೆಂಕಿ ಇಟ್ಟು ಹ*ತ್ಯೆ ಮಾಡಿದ ಪಾಪಿ ಪುತ್ರ !

ಆಸ್ತಿ ವಿವಾದ : ವೃದ್ದ ತಂದೆ-ತಾಯಿಗೆ ಬೆಂಕಿ ಇಟ್ಟು ಹ*ತ್ಯೆ ಮಾಡಿದ ಪಾಪಿ ಪುತ್ರ !

ಕೇರಳ : ಅಲಪ್ಪುಳ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ ಮನೆಯಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ ವೃದ್ಧ ದಂಪತಿ ಸಾವನ್ನಪ್ಪಿದ್ದಾರೆ. ಮೃತರನ್ನು ರಾಘವನ್ (96) ಮತ್ತು ಅವರ ಪತ್ನಿ ಭಾರತಿ (86) ಎಂದು ಗುರುತಿಸಲಾಗಿದ್ದು, ಸ್ವಂತ ಮಗನ ಆಸ್ತಿಗಾಗಿ ಹೆತ್ತವರಿಗೆ ಬೆಂಕಿ ಇಟ್ಟು ಹತ್ಯೆ ಮಾಡಿದ್ದಾನೆ ಎಂದು ತಿಳಿಸಿದ್ದಾರೆ.

ಬೆಳಗಿನ ಜಾವ 3.30ರ ಸುಮಾರಿಗೆ ಮನೆಗೆ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿದ ಚಾಲಕನೋರ್ವ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ್ದನು. ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದು ಕಾರ್ಯಚರಣೆ ಆರಂಭಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಸಫಲರಾಗಿದ್ದರು. ಆದರೆ ವೃದ್ದ ದಂಪತಿಗಳು ಸುಟ್ಟು ಕರಕಲಾಗಿದ್ದರು. ಘಟನೆ ಬಗ್ಗೆ ಮನ್ನಾರ್​ ಪೊಲೀಸರು ತನಿಖೆ ಆರಂಭಿಸಿದ್ದರು.

ಇದನ್ನೂ ಓದಿ :ವಿಮ್ಸ್​ ಆಸ್ಪತ್ರೆಯಲ್ಲಿ ಮತ್ತೋರ್ವ ಬಾಣಂತಿ ಸಾ*ವು: ವೈದ್ಯರ ನಿರ್ಲಕ್ಷ ಎಂದ ಕುಟುಂಬಸ್ಥರು 

ತನಿಖೆ ಆರಂಭಿಸಿದ ಪೊಲೀಸರಿಗೆ ಶಾಕ್​ ಎದುರಾಗಿದ್ದು. ದಂಪತಿಗಳ ಪುತ್ರನಾದ ವಿಜಯನ್​ ಆಸ್ತಿಗಾಗಿ ಮನೆಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದಾಗಿ ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ.

ದಂಪತಿಯ ಐವರು ಮಕ್ಕಳಲ್ಲಿ ಮೂರನೇಯವನಾದ ಈತನು ಆಸ್ತಿಗಾಗಿ ಪ್ರತಿದಿನವೂ ಕುಡಿದು ಬಂದು ಕಿರುಕುಳ ನೀಡುತ್ತಿದ್ದನು ಎಂದು ತಿಳಿದು ಬಂದಿದ್ದು. ಕಳೆದ ಕೆಲ ದಿನಗಳ ಹಿಂದೆ ತಂದೆಯ ಮೇಲೂ ಹಲ್ಲೆ ಮಾಡಿದ್ದನು ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments