Saturday, February 1, 2025

ಮೋದಿ ಲೆಕ್ಕ 2025 : ಯಾವುದು ಇಳಿಕೆ, ಯಾವುದು ಏರಿಕೆ, ಯಾವ ಇಲಾಖೆ ಎಷ್ಟು !

ದೆಹಲಿ : 2025-26ನೇ ಸಾಲಿನ ಕೇಂದ್ರ ಬಜೆಟ್​​ ಮಂಡನೆ ಪೂರ್ಣಗೊಂಡಿದ್ದು. ಮಧ್ಯಮ ವರ್ಗದ ಜನರಿಗೆ ಮೋದಿ ಸರ್ಕಾರ ಭಾರಿ ಕೊಡುಗೆ ನೀಡಿದೆ. 12 ಲಕ್ಷದವರೆಗೂ ಟ್ಯಾಕ್ಸ್​ನ್ನು ಕಡಿತಗೊಳಿಸಿದೆ. ಜೊತೆಗೆ ಈ ಬಾರಿಯ ಬಜೆಟ್​ನಲ್ಲಿ ಕೆಲವು ವಸ್ತುಗಳ ಏರಿಕೆ ಕಂಡಿದ್ದು, ಇನ್ನು ಕೆಲವು ವಸ್ತುಗಳ ಬೆಲೆಯಲ್ಲಿ ಕಡಿಮೆಯಾಗಿದೆ.

ಇಳಿಕೆಯಾದ ವಸ್ತುಗಳು !

ಜೀವರಕ್ಷಕ ಔಷದಿಗಳು, ಶೈಕ್ಷಣಿಕ ಸಾಲದ ಮೇಲಿನ ತೆರಿಗೆ, ಇವಿ ಬ್ಯಾಟರಿಗಳು, ಇವಿ ಕಾರುಗಳು, ಮೊಬೈಲ್​ಗೆ ಬಳಸುವ ಬ್ಯಾಟರಿಗಳು, ಸ್ವದೇಶಿ ಬಟ್ಟೆ, ಕಚ್ಚಾ ವಸ್ತುಗಳು, ಕಚ್ಚಾಚರ್ಮ ವಸ್ತುಗಳು, ಕ್ಯಾನ್ಸರ್​ ಔಷದಿಗಳು, LFD ಮತ್ತು LCD  ಟಿವಿಗಳ ಬೆಲೆಯಲ್ಲಿ ಇಳಿಕೆಯಾಗಿದೆ ಎಂದು ತಿಳಿದು ಬಂದಿದೆ.

ಯಾವುದು ಏರಿಕೆ !

ರೆಡಿಮೇಡ್​ ಉಡುಪುಗಳು, ಪ್ಲಾಸ್ಟಿಕ್​ ಉತ್ಪನ್ನಗಳು, ಫ್ಲಾಟ್​ ಸ್ಕ್ರೀನ್​ ಟಿವಿಗಳ ಬೆಲೆಯಲ್ಲಿ ಏರಿಕೆಯಾಗಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ :ಮಧ್ಯಮ ವರ್ಗಕ್ಕೆ ಮೋದಿ ಬಂಪರ್​​ ಕೊಡುಗೆ: ಆದಾಯ ತೆರಿಗೆಯ ಸ್ಲಾಬ್​ ಇಳಿಕೆ !

ಯಾವ ಇಲಾಖೆಗೆ ಎಷ್ಟು ಹಣ ?

  • ರಕ್ಷಣಾ ಇಲಾಖೆ : 4,91,732 ಕೋಟಿ
  • ಗ್ರಾಮೀಣಾಭಿವೃದ್ದಿ : 2,66,827 ಕೋಟಿ
  • ಗೃಹ ಇಲಾಖೆ : 2,33,211 ಕೋಟಿ
  • ಕೃಷಿ ಇಲಖೆ   : 1,77,437 ಕೋಟಿ
  • ಶಿಕ್ಷಣ ಇಲಾಖೆ :1,28,650 ಕೋಟಿ
  • ಆರೋಗ್ಯ ಇಲಾಖೆ : 98,311 ಕೋಟಿ
  • ನಗರಾಭಿವೃದ್ದಿ ಇಲಾಖೆ :96,777 ಕೋಟಿ
  • ಐಟಿ- ಟೆಲಿಕಾಂ ಕ್ಷೇತ್ರ : 95,298 ಕೋಟಿ
  • ಇಂಧನ ಕ್ಷೇತ್ರ : 81174 ಕೋಟಿ

RELATED ARTICLES

Related Articles

TRENDING ARTICLES