ಬಿಗ್ಬಾಸ್ ಖ್ಯಾತಿಯ ಚೈತ್ರಾ ವಾಸುದೇವನ್ ಅವರು 2ನೇ ಮದುವೆಗೆ ಸಜ್ಜಾಗಿದ್ದಾರೆ ಎಂದು ಇತ್ತೀಚೆಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದರು. ಆದರೆ ಚೈತ್ರ ಅವರು ತಮ್ಮ ಎರಡನೇ ಪತಿ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಇದೀಗ ಚೈತ್ರ ಅವರು ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ.
ಜಗದೀಪ್ ಎಲ್ ಎಂಬುವರ ಜೊತೆ ಚೈತ್ರಾ ಮದುವೆಗೆ ಸಜ್ಜಾಗಿದ್ದಾರೆ. ಇಬ್ಬರು ದೇವಾಲಯವೊಂದರಲ್ಲಿ ಪಿಂಕ್ ಬಣ್ಣದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಪೋಟೊವನ್ನು ಚೈತ್ರಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು. ಕಣ್ ಕಣ್ ಸಲಿಗೆಯ ಪೋಟೊ ನೋಡಿ ಅಭಿಮಾನಿಗಳು ಹೊಸ ಜೋಡಿಗೆ ಶುಭಕೋರಿದ್ದಾರೆ.
ಇದನ್ನೂ ಓದಿ : ತಲೈವನ ಜೊತೆ ಕೊಡಗಿನ ಕುವರಿ ರಶ್ಮಿಕಾ ಸಿನಿಮಾ ?
ಇದೇ ಮಾರ್ಚ್ನಲ್ಲಿ ಚೈತ್ರ ದಾಪಾಂತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ತಿಳಿದು ಬಂದಿದ್ದು. ಇತ್ತೀಚೆಗೆ ಪ್ಯಾರಿಸ್ನಲ್ಲಿ ನಟಿ ತಮ್ಮ ಭಾವಿ ಪತಿ ಜೊತೆ ಪೋಟೊಶೂಟ್ ಮಾಡಿಸಿದ್ದರು. ಜೊತೆಗೆ ಮದುವೆಗೆ ಶಾಂಪಿಂಗ್ ಕೂಡ ಮಾಡಿದ್ದರು.